Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗೇಮ್‌ ನಿಲ್ಲಿಸಿದ್ದಕ್ಕೆ 8ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

Spread the love

ಜೈಪುರ: ಮೊಬೈಲ್ ಗೇಮ್ ಆಡಬೇಡ ಎಂದು ತಂದೆ ಬೈದಿದ್ದಕ್ಕೆ 15 ವರ್ಷದ ಬಾಲಕ ಆತ್ಮಹತ್ಯೆ(Suicide)ಗೆ ಶರಣಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ನವೆಂಬರ್ 5ರಂದು ಧೋಲ್ಪುರ್ ಜಿಲ್ಲೆಯ ಕುರ್ರೆಂಡಾ ಗ್ರಾಮದಲ್ಲಿ ಘಟನೆ ಡನೆದಿದ್ದು, ಬಾಲಕ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಮೃತ ಬಾಲಕನ ಹೆಸರು ರಾಜವೀರ್ ಬಘೇಲ್. ಪ್ರಾಥಮಿಕ ಮಾಹಿತಿಗಳ ಪ್ರಕಾರ, ಬಾಲಕ ಫ್ರೀ ಫೈರ್ ಎಂಬ ಮೊಬೈಲ್ ಗೇಮ್​ಗೆ ಅಡಿಕ್ಟ್​ ಆಗಿದ್ದ, ಇದರಿಂದಾಗಿ ತಂದೆ ಕೋಪಗೊಂಡು ಮೊಬೈಲ್ ಗೇಮ್ ಬಿಟ್ಟು ಓದಿನೆಡೆಗೆ ಹೆಚ್ಚು ಗಮನಕೊಡು ಎಂದು ಗದರಿದ್ದರು.

ಅಷ್ಟೇ ಅಲ್ಲದೆ ತಂದೆ ರಾಜವೀರ್ ಬಘೇಲ್ ಆಟ ಆಡುತ್ತಿದ್ದಾಗ ಅವನ ಫೋನ್ ಅನ್ನು ಕಸಿದುಕೊಂಡು ವಶಪಡಿಸಿಕೊಂಡಿದ್ದರು. ಕೋಪಗೊಂಡ ಹುಡುಗ ನೇರವಾಗಿ ತನ್ನ ಕೋಣೆಗೆ ಹೋದನು. ಅಷ್ಟರಲ್ಲಿ, ಕುಟುಂಬದ ಇತರ ಸದಸ್ಯರು ಊಟ ಮಾಡುತ್ತಿದ್ದರು.

ಊಟದ ನಂತರ ಅವರು ಬಾಲಕನ ಕೋಣೆಗೆ ಹೋದಾಗ, ಅವರ ಮಗ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ಕಂಡಿದ್ದಾರೆ. ಕೂಡಲೇ ಕುಣಿಕೆಯಿಂದ ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ಅಲ್ಲಿ ವೈದ್ಯರು ಆತ ಮೃತಪಟ್ಟಿದ್ದಾನೆಂದು ಘೋಷಿಸಿದ್ದಾರೆ.

ಆ ಹುಡುಗ ಐದು ಜನ ಒಡಹುಟ್ಟಿದವರಲ್ಲಿ ಮೂರನೆಯವನಾಗಿದ್ದು, 8ನೇ ತರಗತಿಯಲ್ಲಿ ಓದುತ್ತಿದ್ದ. ಗುರುವಾರ ರಾಜ್‌ವೀರ್ ಬಾಘೇಲ್ ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ವಿಚಾರಣೆಯ ಸಮಯದಲ್ಲಿ, ಕುಟುಂಬ ಸದಸ್ಯರು ವಿಷ್ಣು ತನ್ನ ಮೊಬೈಲ್‌ನಲ್ಲಿ ಫ್ರೀ ಫೈರ್ ಆಟ ಆಡುತ್ತಿದ್ದನೆಂದು ಹೇಳಿದರು. ತಂದೆ ತನ್ನ ಆಟ ನಿಲ್ಲಿಸಿದಾಗ, ಕೋಪಗೊಂಡು ಕೋಣೆಗೆ ಹೋದವನೇ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ ಎಂದು ಹೆಡ್ ಕಾನ್‌ಸ್ಟೆಬಲ್ ಕಪಿಲ್ ಶರ್ಮಾ ಹೇಳಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.


Spread the love
Share:

administrator

Leave a Reply

Your email address will not be published. Required fields are marked *