Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

861 ಕಲ್ಲುಗಳು ಪಿತ್ತಕೋಶದಲ್ಲಿ! ಮೈಸೂರಿನಲ್ಲಿ ಅಚ್ಚರಿಯ ಶಸ್ತ್ರಚಿಕಿತ್ಸೆ

Spread the love

ಮಹಿಳೆ ಪಿತ್ತಕೋಶದಿಂದ 861 ಕಲ್ಲು ಹೊರ ತೆಗೆದ ವೈದ್ಯರು!

ಮೈಸೂರು: ನಗರದ ಕಾವೇರಿ ಹಾರ್ಟ್‌ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅಪರೂಪದ ವೈದ್ಯಕೀಯ ಪ್ರಕರಣದಲ್ಲಿ 55 ವರ್ಷದ ಮಹಿಳೆಯೊಬ್ಬರ ಗಾಲ್‌ಬ್ಲಾಡರ್‌(ಪಿತ್ತಕೋಶ)ನಿಂದ 861 ಕಲ್ಲುಗಳನ್ನು ಯಶಸ್ವಿಯಾಗಿ ಹೊರ ತೆಗೆಯಲಾಗಿದೆ.

ಮಹಿಳೆಯು ತೀವ್ರ ಹೊಟ್ಟೆನೋವು ಮತ್ತು ಜಾಂಡಿಸ್‌ ಕಾಯಿಲೆ ಇದೆ ಎಂದು ಆಸ್ಪತ್ರೆಗೆ ಆಗಮಿಸಿದ್ದರು.

ತಪಾಸಣೆ ಮಾಡಿದ ಬಳಿಕ ಗಾಲ್‌ ಬ್ಲಾಡರ್‌ ಹಾಗೂ ಬೈಲ್‌ ಡಕ್ಟ್ ಎರಡರಲ್ಲಿ ಕೂಡ ಕಲ್ಲುಗಳು ಇರುವುದು ದೃಢಪಟ್ಟಿತು.

ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ನಿಖಿಲ್ ಕುಮಾರ್ ಜೋಗೆ ಹಾಗೂ ಲ್ಯಾಪರೊಸ್ಕೋಪಿಕ್ ಸೀನಿಯರ್ ಸರ್ಜನ್ ಡಾ. ಆರ್ಎಂ ಅರವಿಂದ್ ಅವರ ನೇತೃತ್ವದಲ್ಲಿ ಲ್ಯಾಪರೋಸ್ಕೋಪಿಕ್‌ ಗಾಲ್‌ ಬಾರ್ಡರ್‌ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, 861 ಕಲ್ಲುಗಳನ್ನು ಹೊರ ತೆಗೆಯಲಾಗಿದೆ. ಶಸ್ತ್ರಚಿಕಿತ್ಸೆ ನಡೆದ ಮರುದಿನವೇ ಮಹಿಳೆಯನ್ನು ಡಿಸ್ಚಾರ್ಜ್ ಮಾಡಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *