₹75 ಲಕ್ಷ ಬೆಲೆಯ ‘ಸಾರಂಗ ಜೀರುಂಡೆ’: ಅದೃಷ್ಟದ ಸಂಕೇತ ಮತ್ತು ವಿಶೇಷತೆಗಳು

ಸಾರಂಗ ಜೀರುಂಡೆಗಳು ತಮ್ಮ ಅದ್ಭುತ ವೈಶಿಷ್ಟ್ಯದೊಂದಿಗೆ ಪ್ರಪಂಚದಾದ್ಯಂತ ಸಂಚಲನ ಸೃಷ್ಟಿಸುತ್ತಿವೆ. ಈ ಜೀರುಂಡೆಗಳನ್ನು ಅನೇಕ ದೇಶಗಳಲ್ಲಿ ಶುಭ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಇವುಗಳನ್ನು ಜನರು 75 ಲಕ್ಷ ರೂ. ಹೆಚ್ಚಿನ ಮೊತ್ತ ನೀಡಿ ಖರೀದಿಸುತ್ತಾರೆ.

ಈ ಕೀಟ ಯಾರ ಬಳಿ ಇರುತ್ತೋ ಅವರಿಗೆ ಅದೃಷ್ಟ ಬರುತ್ತದೆ ಮತ್ತು ಹಠಾತ್ ಸಂಪತ್ತು ಹೆಚ್ಚಳವಾಗುತ್ತೆ ಎಂದು ನಂಬಲಾಗಿದೆ. ಕೆಲವರು ಇದನ್ನು ಮನೆಯಲ್ಲಿ ಇಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಎಂದು ಹೇಳುತ್ತಾರೆ. ಈ ನಂಬಿಕೆಯಿಂದಾಗಿ, ಅನೇಕ ಶ್ರೀಮಂತರು ಈ ಕೀಟವನ್ನು ಲಕ್ಷಗಟ್ಟಲೆ ಹಣ ಕೊಟ್ಟು ಖರೀದಿ ಮಾಡ್ತಾರೆ.
ಏಷ್ಯಾದ ಕೆಲವು ದೇಶಗಳಲ್ಲಿ ಸಾರಂಗ ಜೀರುಂಡೆಯನ್ನು ಸಾಂಪ್ರದಾಯಿಕ ಔಷಧದಲ್ಲಿಯೂ ಬಳಸಲಾಗುತ್ತದೆ. ಕೆಲವು ರೋಗಗಳನ್ನು ಅದರ ದೇಹದಿಂದ ಹೊರತೆಗೆಯುವ ಅಂಶಗಳಿಂದ ಗುಣಪಡಿಸಬಹುದು ಎಂದು ನಂಬಲಾಗಿದೆ. ಇದಕ್ಕೆ ವೈಜ್ಞಾನಿಕ ಪುರಾವೆಗಳ ಕೊರತೆಯಿದ್ದರೂ, ಮಾರುಕಟ್ಟೆಯಲ್ಲಿ ಅದರ ಔಷಧೀಯ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ.
ಅಷ್ಟೇ ಅಲ್ಲ, ಸಾರಂಗ ಜೀರುಂಡೆ ಸಾವಯವ ಪದಾರ್ಥಗಳ ವಿಭಜನೆಗೆ ಸಹಾಯ ಮಾಡುತ್ತದೆ. ಇದು ಮಣ್ಣಿನಲ್ಲಿ ಪೋಷಕಾಂಶಗಳನ್ನು ಸೃಷ್ಟಿಸಿ, ಉತ್ತಮ ಇಳುವರಿಗೆ ಮಣ್ಣಿನ ಗುಣಮಟ್ಟವನ್ನು ಕಾಪಾಡುತ್ತವೆ ಎಂದು ಹೇಳಲಾಗುತ್ತದೆ. ಸಾರಂಗ ಜೀರುಂಡೆಯ ಜೀವನ ಚಕ್ರವು ತುಂಬಾ ಆಸಕ್ತಿದಾಯಕವಾಗಿದೆ. ಇವು ತಮ್ಮ ಜೀವನದ ಬಹುಪಾಲು ಸಮಯವನ್ನು ನೆಲದಡಿಯಲ್ಲಿ ಕಳೆಯುತ್ತವೆ. ಇವು ಸುಮಾರು 3 ರಿಂದ 7 ವರ್ಷಗಳವರೆಗೆ ಬದುಕಬಲ್ಲವು.