Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಿಹಾರದಲ್ಲಿ 74 ಲಕ್ಷ ‘ನಾಪತ್ತೆ’ ಮತದಾರರು: ಹುಡುಕಿಕೊಡುವಂತೆ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗದ ಮನವಿ!

Spread the love

ಪಾಟ್ನಾ: ತಮ್ಮ ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಅಕ್ರಮ ವಲಸಿಗರಿಗೆ ಮತ್ತು ನಕಲಿ ಮತದಾರರ ಸೃಷ್ಟಿಸುತ್ತಿದ್ದ ರಾಜಕೀಯ ಪಕ್ಷಗಳ Fake ಆಟಕ್ಕೆ ಕೇಂದ್ರ ಚುನಾವಣಾ ಆಯೋಕ ಚೆಕ್ ಇಟ್ಟಿದ್ದು, ಮಿಸ್ ಆಗಿರುವ 74 ಲಕ್ಷ ಮತದಾರರ ಹುಡುಕಿ ಕೊಡಿ ಎಂದು ರಾಜಕೀಯ ಪಕ್ಷಗಳ ಕೇಳಿದೆ.

ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆ ನಡೆಸುತ್ತಿರುವ ಚುನಾವಣಾ ಆಯೋಗ, ನಾಪತ್ತೆಯಾಗಿರುವ ಅಂದಾಜು 74 ಲಕ್ಷ ಮತದಾರರನ್ನು ಹುಡುಕಿಕೊಡಿ ಎಂದು ರಾಜಕೀಯ ಪಕ್ಷಗಳಲ್ಲಿ ಮನವಿ ಮಾಡಿದೆ. ರಾಜ್ಯದಲ್ಲಿ ಅಕ್ರಮ ವಲಸಿಗರು, ಸೂಕ್ತ ದಾಖಲೆ ಇಲ್ಲದವರ ಹೆಸರನ್ನು ಕೈಬಿಡುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ.

ಸೋಮವಾರ ಆಯೋಗವು 12 ಪಕ್ಷಗಳ ಪ್ರತಿನಿಧಿಗಳನ್ನು ಭೇಟಿಯಾಗಿದ್ದು, ‘ದಾಖಲೆಗಳಲ್ಲಿ ನಮೂದಾಗಿರುವ ವಿಳಾಸಗಳಲ್ಲಿ 43.93 ಲಕ್ಷಜನವಾಸವಿಲ್ಲ. ಅತ್ತ ನಮ್ಮಿಂದ ಫಾರಂಗಳನ್ನು ಪಡೆದುಕೊಂಡು ಹೋಗಿರುವ 29.62 ಲಕ್ಷ ಜನರ ಪತ್ತೆಯೇ ಇಲ್ಲ. ಒಟ್ಟು 74 ಲಕ್ಷ ಜನರ ಕುರುಹೇ ಸಿಗುತ್ತಿಲ್ಲ’ ಎಂದು ಮಾಹಿತಿ ನೀಡಿದೆ.

ಜತೆಗೆ, ಜಿಲ್ಲಾಧಿಕಾರಿಗಳು ಮತ್ತು ಪಕ್ಷಗಳು ನೇಮಿಸಿದ ಸುಮಾರು 1.5 ಲಕ್ಷ ಬೂತ್ ಮಟ್ಟದ ಏಜೆಂಟ್‌ಗಳ ಮೂಲಕ ಈ ಮತದಾರರೊಂದಿಗೆ ಸಂಪರ್ಕ ಸಾಧಿಸಲು ಸಹಕರಿಸುವಂತೆ ರಾಜಕೀಯ ಪಕ್ಷಗಳಿಗೆ ವಿನಂತಿಸಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಆಯೋಗವು, ‘ಯಾವೊಬ್ಬ ಅರ್ಹ ಮತದಾರನೂ ತಪ್ಪಿಹೋಗಬಾರದು ಎಂಬ ಉದ್ದೇಶದಿಂದ, ಈ ಕೆಲಸದಲ್ಲಿ ಕೈಜೋಡಿಸುವಂತೆ ರಾಜಕೀಯ ಪಕ್ಷಗಳಲ್ಲಿ ಕೇಳಿಕೊಳ್ಳಲಾಗಿದೆ’ ಎಂದಿದೆ.

ಆಗಸ್ಟ್ 1ರಂದು ಕರಡು ಮತಪಟ್ಟಿ ಪ್ರಕಟವಾಗಲಿದ್ದು, ಬಿಹಾರದ ಈ ಬೃಹತ್ ಮರು ಪರಿಷ್ಕರಣಾ ಅಭಿಯಾನ ಇನ್ನು ಕೇವಲ ನಾಲ್ಕು ದಿನಗಳಲ್ಲಿ ಅಂದರೆ ಜುಲೈ 25 ರಂದು ಅಂತ್ಯವಾಗಲಿದೆ.

ಚುನಾವಣಾ ಆಯೋಗದ ವೈಫಲ್ಯ ಎಂದ ಕಾಂಗ್ರೆಸ್

ಇನ್ನು ಚುನಾವಣಾ ಆಯೋಗದ ಈ “ವಿಶೇಷ ತೀವ್ರ ಪರಿಷ್ಕರಣೆ” (SIR) ನ ಅಂತಿಮ ಗಂಟೆಗಳಲ್ಲಿ ರಾಜಕೀಯ ಪಕ್ಷಗಳನ್ನು ಸೇರಿಸಿಕೊಳ್ಳುವ ECI ನಿರ್ಧಾರವು ತೀವ್ರ ಟೀಕೆಗೆ ಗುರಿಯಾಗಿದೆ. ‘ ಇದು ಭಾರತದ ಚುನಾವಣಾ ಆಯೋಗದ ಸಂಪೂರ್ಣ ವೈಫಲ್ಯವಾಗಿದೆ.

ಅಲ್ಲಿ ಅವರು ತಮ್ಮ ಸಾಂವಿಧಾನಿಕ ಜವಾಬ್ದಾರಿಗಳಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು AICC ಸದಸ್ಯ ಮತ್ತು ಕಾಂಗ್ರೆಸ್ ಪಕ್ಷದ ದತ್ತಾಂಶ ವಿಶ್ಲೇಷಣಾ ವಿಭಾಗದ ರಾಷ್ಟ್ರೀಯ ಸಂಯೋಜಕ ರಾಹುಲ್ ಬಾಲ್ ಹೇಳಿದ್ದಾರೆ.

ಅವರು ಪ್ರಜಾಪ್ರಭುತ್ವದ ಮೂಲ ತತ್ವಗಳನ್ನು ಕೊಲ್ಲುತ್ತಿದ್ದಾರೆ. ಮತದಾರರ ಪಾತ್ರವನ್ನು ತಟಸ್ಥವಾಗಿ ಸರಿಪಡಿಸಬೇಕು ಮತ್ತು ತಟಸ್ಥವಾಗಿ ನಿರ್ಣಯಿಸಬೇಕು ಎಂಬುದು ಮೂಲ ತತ್ವವಾಗಿದೆ ಎಂದು ಹೇಳಿದರು.


Spread the love
Share:

administrator

Leave a Reply

Your email address will not be published. Required fields are marked *