Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚಿಕನ್ ಕೇಳಿದ್ದಕ್ಕೆ ಲಟ್ಟಣಿಗೆಯಿಂದ ಹೊಡೆದು 7 ವರ್ಷದ ಮಗನ ಕೊಲೆ

Spread the love

ಮುಂಬೈ: ಮಕ್ಕಳು ಚಿಕನ್ ಕೇಳಿದ್ರು ಅಂತ ತಾಯಿಯೊಬ್ಬಳು ಪುಟ್ಟ ಮಕ್ಕಲಿಗೆ ಚಪಾತಿ ಮಾಡುವ ಲಟ್ಟಣಿಗೆಯಲ್ಲಿ ಬಾರಿಸಿದ್ದರಿಂದ 7 ವರ್ಷದ ಮಗ ಮೃತಪಟ್ಟು ಆತನ 10 ವರ್ಷದ ಅಕ್ಕ ಗಂಭೀರವಾಗಿ ಗಾಯಗೊಂಡಂತಹ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ನಡೆದಿದೆ. ಘಟನೆಯಲ್ಲಿ ಮೃತನಾದ ಬಾಲಕನನ್ನು 7 ವರ್ಷದ ಚಿನ್ಮಯ್ ಧುಮ್ಡೆ ಎಂದು ಗುರುತಿಸಲಾಗಿದೆ. ಪಲ್ಲವಿ ಧುಮ್ಡೆ ಮಗನನ್ನೇ ಕೊಂದ ತಾಯಿ.

ಚಪಾತಿ ಲಟ್ಟಿಸುವ ಲಟ್ಟಣಿಗೆಯಿಂದ ಹಿಗ್ಗಾಮುಗ್ಗಾ ಥಳಿಸಿದ ತಾಯಿ

ಚಿನ್ಮಯ್ ಧುಮ್ಡೆ ತಾಯಿಯ ಜೊತೆ ತನಗೆ ಚಿಕನ್ ಕರಿ ಬೇಕು ಎಂದು ಹೇಳಿದ್ದಾನೆ. ಇದರಿಂದ ಸಿಟ್ಟುಗೊಂಡ ತಾಯಿ ಪಲ್ಲವಿ ಮಗನನ್ನು ಚಪಾತಿ ಲಟ್ಟಿಸು ಲಟ್ಟಣಿಗೆಯಿಂದ ಹಿಗ್ಗಾಮುಗ್ಗಾ ಬಾರಿಸಿದ್ದು, ಇದರಿಂದ 7 ವರ್ಷದ ಮಗ ಚಿನ್ಮಯ್ ಸಾವನ್ನಪ್ಪಿದ್ದು, ಆತನ 10 ವರ್ಷದ ಸೋದರಿಗೆ ಗಂಭೀರವಾದ ಗಾಯಗಳಾಗಿವೆ. ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಮಕ್ಕಳ ಕೂಗಾಟದ ವಿಚಾರ ತಿಳಿದು ನೆರೆಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಂದಿದ್ದು, ಪೊಲೀಸರು ತಾಯಿ ಪಲ್ಲವಿ ಧುಮ್ಡೆ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

40 ವರ್ಷದ ಪಲ್ಲವಿ ಘುಮ್ಡೆ ತನ್ನ ಕುಟುಂಬದ ಜೊತೆ ಪಾಲ್ಘರ್‌ನ ಕಾಶಿಪಡ ಪ್ರದೇಶದಲ್ಲಿ ವಾಸ ಮಾಡ್ತಿದ್ದರು. ಆಕೆಯ ಮಗ ಚಿನ್ಮಯ್ ಗಣೇಶ್

ಧುಮ್ಡೆ, ಚಿಕನ್ ಕರಿ ಬೇಕು ಎಂದು ಹಠ ಮಾಡಿದ್ದಾನೆ. ಇದರಿಂದ ತಾಳ್ಮೆ ಕಳೆದುಕೊಂಡ ತಾಯಿ ಆತನನ್ನು ಲಟ್ಟಣಿಗೆಯಿಂದ ಹೊಡೆದಿದ್ದು, ಪರಿಣಾಮ ಆತ ಮೃತಪಟ್ಟಿದ್ದಾನೆ. ನಂತರ ಆಕೆ 10 ವರ್ಷದ ಮಗಳಿಗೂ ಬಾರಿಸಿದ್ದಾಳೆ. ಆಕೆಯ ಸ್ಥಿತಿ ಗಂಭೀರವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪಲ್ಘಾರ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತಾಯಿ ಪಲ್ಲವಿಯನ್ನು ಬಂಧಿಸಲಾಗಿದೆ. ಫಾಲ್ಘರ್ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮಾಡುತ್ತಿದ್ದಾರೆ ಎಂದು ಜಿಲ್ಲಾ ಎಸ್‌ಪಿ ಯತೀಶ್ ದೇಶ್‌ಮುಖ್ ಹೇಳಿದ್ದಾರೆ.

ಒಟ್ಟಿನಲ್ಲಿ ತಾಯಿಯೊಬ್ಬಳ ಕೆಲ ಕ್ಷಣಗಳ ಉಗ್ರ ಕೋಪ ಮಗನ ಜೀವ ಬಲಿಪಡೆದಿದೆ.


Spread the love
Share:

administrator

Leave a Reply

Your email address will not be published. Required fields are marked *