ಪಾರ್ಕಿನ್ಸನ್ ಕಾಯಿಲೆಗೆ ಮೆದುಳಿನ ಶಸ್ತ್ರಚಿಕಿತ್ಸೆ ವೇಳೆ ಕ್ಲಾರಿನೆಟ್ ನುಡಿಸಿದ 65 ವರ್ಷದ ಲಂಡನ್ ಮಹಿಳೆ!

ಪಾರ್ಕಿನ್ಸನ್ (Parkinson) ಕಾಯಿಲೆಯಿಂದ ಬಳಲುತ್ತಿದ್ದ ಲಂಡನ್ನ 65 ವರ್ಷದ ಮಹಿಳೆಗೆ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಶಸ್ತ್ರಚಿಕಿತ್ಸೆ ವೇಳೆ ಆ ಮಹಿಳೆ ಕ್ಲಾರಿನೆಟ್ ನುಡಿಸಿದ್ದು, ಇದೀಗ ಎಲ್ಲ ಕಡೆ ವೈರಲ್ ಆಗಿದೆ. ಕ್ಲಾರಿನೆಟ್ ನುಡಿಸುತ್ತಿದ್ದ ಮಹಿಳೆ ನಿವೃತ್ತಿ ಹೊಂದಿದ ನಂತರ 2014ರಲ್ಲಿ ಪಾರ್ಕಿನ್ಸನ್ ಇರುವುದು ಪತ್ತೆಯಾಗಿದೆ. ಈ ಮೆದುಳಿನ ಅಸ್ವಸ್ಥತೆಯು ನಡುಕ, ನಿಧಾನ ಮತ್ತು ಬಿಗಿತವನ್ನು ಉಂಟುಮಾಡುತ್ತದೆ ಮತ್ತು ಮೆದುಳು ಹೆಚ್ಚು ಹೆಚ್ಚು ಹಾನಿಯಾಗುವಂತೆ ಮಾಡುತ್ತದೆ. ಬೇಕನ್ ಅವರಿಗೆ ಪಾರ್ಕಿನ್ಸನ್ ಕಾಯಿಲೆಯಿಂದ ಚಲನೆಗಳು ನಿಧಾನವಾಗುವುದು, ಸ್ನಾಯುಗಳ ಬಿಗಿತದಿಂದ ನಡೆಯಲು, ಈಜಲು, ನೃತ್ಯ ಮಾಡಲು ಮತ್ತು ಕ್ಲಾರಿನೆಟ್ ನುಡಿಸಲು ಸಾಧ್ಯವಾಗುತ್ತಿರಲಿಲ್ಲ.

ಈ ಕಾಯಿಲೆಗೆ ಕಿಂಗ್ಸ್ ಕಾಲೇಜು ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಯಿತು. ಕಾಯಿಲೆಯಿಂದ ಅವರ ಮೆದುಳಿಗೆ ಹೆಚ್ಚು ಹಾನಿಯನ್ನು ಉಂಟು ಮಾಡಿತ್ತು. ಈ ಹಿಂದೆ ಅವರು ಬೇರೆ ಬೇರೆ ಯಶಸ್ವಿ ಕ್ಲಾರಿನೆಟ್ ಪ್ರದರ್ಶನಗಳನ್ನು ನೀಡಿದ್ದರು. ಆದರೆ ಅವರಿಂದ ಈ ಕಾಯಿಲೆ ಎಲ್ಲವನ್ನು ಕಿತ್ತುಕೊಂಡಿತ್ತು. ಬೇಕನ್ ಅವರಿಗೆ 4 ಗಂಟೆಗಳ ವರೆಗೆ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಇನ್ನು ಈ ವೇಳೆ ನೆತ್ತಿ ಮತ್ತು ತಲೆಬುರುಡೆಯನ್ನು ಮರಗಟ್ಟಲು ಅರಿವಳಿಕೆ ನೀಡಲಾಯಿತು. ಈ ಚಿಕಿತ್ಸೆಯ ನಂತರ ಆಕೆಯ ಬೆರಳುಗಳು ಹೆಚ್ಚು ಸುಲಭವಾಗಿ ಚಲಿಸಲು ಶುರು ಮಾಡಿದೆ. ಈ ವೇಳೆ ಬೇಕನ್ ಕ್ಲಾರಿನೆಟ್ ನುಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಬೇಕನ್ ತನ್ನ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ. “ನನ್ನ ಬಲಗೈ ಹೆಚ್ಚು ಸುಲಭವಾಗಿ ಚಲಿಸುತ್ತಿತ್ತು ಎಂಬುದು ನನಗೆ ನೆನಪಿದೆ, ಮತ್ತು ಇದು ಕ್ಲಾರಿನೆಟ್ ನುಡಿಸುವ ನನ್ನ ಸಾಮರ್ಥ್ಯವನ್ನು ಸುಧಾರಿಸಿತು. ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅವರು ಕ್ಲಾರಿನೆಟ್ ನುಡಿಸುತ್ತಿರುವ ವೀಡಿಯೊವನ್ನು ಅಸೋಸಿಯೇಟೆಡ್ ಪ್ರೆಸ್ ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇನ್ನು ಈ ವಿಡಿಯೋ ನೋಡಿ ಅನೇಕ ಸೋಶಿಯಲ್ ಮೀಡಿಯಾ ಬಳಕೆದಾರರು ಬೇಕನ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಶಸ್ತ್ರಚಿಕಿತ್ಸೆ ಮಧ್ಯೆ ಕ್ಲಾರಿನೆಟ್ ನುಡಿಸಿರುವುದು ನಿಮ್ಮ ಧೈರ್ಯಕ್ಕೆ ಮೆಚ್ಚಲೇಬೇಕು ಎಂದು ಬಳಕೆಯೊಬ್ಬರು ಹೇಳಿದ್ದಾರೆ. ಈ ಶಸ್ತ್ರಚಿಕಿತ್ಸೆ ತುಂಬಾ ಯಶಸ್ವಿಯಾಗಿದೆ ನಡೆದಿದೆ ಎಂದು ಅಲ್ಲಿ ವೈದ್ಯರು ಹೇಳಿದ್ದಾರೆ.