Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಲಾರಿಯಲ್ಲಿ ಸಾಗಿಸುತ್ತಿದ್ದ 65 ಕೆ.ಜಿ. ಗಾಂಜಾ ವಶ, ಇಬ್ಬರ ಬಂಧನ

Spread the love

ಉಡುಪಿ : ಲಾರಿಯಲ್ಲಿ ಸಾಗಿಸುತ್ತಿದ್ದ 65 ಕೆ.ಜಿ. ಗಾಂಜಾವನ್ನು ಉಡುಪಿಯ ಕಿನ್ನಿಮುಲ್ಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೆನ್‌ ಅಪರಾಧ ಠಾಣೆಯ ಪೊಲೀಸರು ಗುರುವಾರ ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು ಹುಣಸೂರಿನ ಗಣೇಶ(38), ಆಂಧ್ರದ ಅನಂತಪುರಂನ ಪಿ. ಗೋಪಾಲ ರೆಡ್ಡಿ(43) ಎನ್ನುವವರಾಗಿದ್ದಾರೆ.

ಮಂಗಳೂರಿನಿಂದ ಉಡುಪಿಗೆ ಬರುತ್ತಿದ್ದ ಲಾರಿಯನ್ನು ಖಚಿತ ಮಾಹಿತಿಯಂತೆ ಪರಿಶೀಲಿಸಿದಾಗ ಗಾಂಜಾ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಲ್ಲಿ ಪೊಲೀಸ್‌ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
65 ಕೆಜಿ 39 ಗ್ರಾಂ ಗಾಂಜಾ( ಅಂದಾಜು ಮೌಲ್ಯ ರೂ. 32 ರಿಂದ 50 ಲಕ್ಷ ರೂ.), ಗೂಡ್ಸ್ ಲಾರಿ, 2 ಮೊಬೈಲ್ ಪೋನ್ ಗಳು, 1520 ರೂ. ನಗದು ಮತ್ತು ಇತರ ಸೊತ್ತುಗಳನ್ನು ವಶಪಡಿಸಿಕೊಂಡು ಮಲ್ಪೆ ಪೊಲೀಸ್‌ ಠಾಣೆಯಲ್ಲಿ NDPS Act 1985 ರಂತೆ ಪ್ರಕರಣ ದಾಖಲಾಗಿದೆ.

ಸ್ವಾಧೀನ ಪಡಿಸಿದ ಸೊತ್ತುಗಳ ಅಂದಾಜು ಮೌಲ್ಯ 72 ಲಕ್ಷದ 21 ಸಾವಿರದ 520 ರೂ. ಎಂದು ಪೊಲೀಸರು ತಿಳಿಸಿದ್ದಾರೆ


Spread the love
Share:

administrator

Leave a Reply

Your email address will not be published. Required fields are marked *