Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

64 ಲಕ್ಷ ರೂಪಾಯಿ ವಂಚನೆ: ಐಟಿ ತಜ್ಞ ಮತ್ತು ತಂದೆ ಬಂಧನ

Spread the love

ಇಂದೋರ್ : ಜಿಲ್ಲಾ ನ್ಯಾಯಾಲಯದ ಬ್ಯಾಂಕ್ ಖಾತೆಯಿಂದ 64 ಲಕ್ಷ ರೂಪಾಯಿಗಳನ್ನು ವಂಚಿಸಿ, ವಿದೇಶ ಪ್ರವಾಸ ಮತ್ತು ದುಬಾರಿ ಮೊಬೈಲ್ ಫೋನ್‌ಗಳ ಖರೀದಿಗೆ ಖರ್ಚು ಮಾಡಿದ್ದ ಐಟಿ ತಜ್ಞ ಮತ್ತು ಆತನ ತಂದೆಯನ್ನು ಪೊಲೀಸರು ಬಂಧಿಸಿದ ಘಟನೆ ಇಂದೋರ್​​​​ನಲ್ಲಿ ಮಂಗಳವಾರ (ಜೂ.17) ನಡೆದಿದೆ.

ಈ ಪ್ರಕರಣದ ತನಿಖೆಯ ದೊರೆತ ದಾಖಲೆಗಳ ಆಧಾರದ ಮೇಲೆ ಗುಜರಾತ್‌ನ ವಲ್ಸಾದ್‌ನಿಂದ ಸಾಹಿಲ್ ರಂಗ್ರೆಜ್ (26) ಮತ್ತು ಆತನ ತಂದೆ ಸಾಜಿದ್ ಸತ್ತಾರ್ (57) ಅವರನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಪೊಲೀಸ್​​ ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಚ್ 5 ರಿಂದ ಜೂನ್ 11 ರ ನಡುವೆ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದ ಬ್ಯಾಂಕ್ ಖಾತೆಯಿಂದ 64.05 ಲಕ್ಷ ರೂ.ಗಳನ್ನು ವಂಚಿಸಿದ್ದಕ್ಕಾಗಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಇಂದೋರ್‌ನ ಹೆಚ್ಚುವರಿ ಪೊಲೀಸ್ ಆಯುಕ್ತ ರಾಜೇಶ್ ದಂಡೋಟಿಯಾ ಹೇಳಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *