ಭೂಕಂಪನದಿಂದ 60 ಮಸೀದಿ ಕುಸಿತ; ನಮಾಜ್ ವೇಳೆ 700ಕ್ಕೂ ಹೆಚ್ಚು ಜನ ದುರ್ಮರಣ!

ಮ್ಯಾನ್ಮರ್‌ನಲ್ಲಿ ಸಂಭವಿಸಿದ ಭಾರಿ ಭೂಕಂಪನದಿಂದ 60ಕ್ಕೂ ಹೆಚ್ಚು ಮಸೀದಿಗಳು ಕುಸಿದು ಬಿದ್ದು, ಶುಕ್ರವಾರದ ನಮಾಜ್ ವೇಳೆ ಪ್ರಾರ್ಥನೆ ಮಾಡುತ್ತಿದ್ದ 700ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಂ ನೆಟ್‌ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಅವರ ಪ್ರಕಾರ, 7.7 ತೀವ್ರತೆಯ ಭೂಕಂಪನದಿಂದ ಹಲವಾರು ಮಸೀದಿಗಳು ಹಾನಿಗೊಳಗಾದ್ದು, ಕೆಲವು ಸಂಪೂರ್ಣವಾಗಿ ನೆಲಸಮವಾದವು.
ಮ್ಯಾನ್ಮರ್‌ನಲ್ಲಿ ಭೂಕಂಪನದಿಂದ ಒಟ್ಟು 1,700ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಮಸೀದಿ ಕುಸಿದು ಮೃತಪಟ್ಟವರ ಸಂಖ್ಯೆ ಇದರಲ್ಲಿ ಸೇರಿದೆಯೇ ಎಂಬುದನ್ನು ಇನ್ನಷ್ಟೇ ಸ್ಪಷ್ಟಪಡಿಸಬೇಕಾಗಿದೆ.
ಶುಕ್ರವಾರ ನಮಾಜ್ ವೇಳೆ ಜನರು ಭಾರೀ ಸಂಖ್ಯೆಯಲ್ಲಿ ಸೇರಿದ್ದ ಸಂದರ್ಭದಲ್ಲಿ ಭೂಕಂಪನ ಸಂಭವಿಸಿದ್ದು, ಮಸೀದಿಗಳ ಗೋಪುರಗಳು ಕುಸಿದಿವೆ. ಭಯಭೀತ ಜನರು ತಕ್ಷಣವೇ ಹೊರಗೆ ಓಡಿ ಬಂದ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಮ್ಯಾನ್ಮರ್ ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ, ಭೂಕಂಪನದಿಂದ 1,700ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 300ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. 3,400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ