4.5 ಕಿ.ಮೀ. ಉದ್ದದ ಗೂಡ್ಸ್ ರೈಲು ಸಂಚಾರ ಭಾರತೀಯ ರೈಲ್ವೆಯ ಹೊಸ ದಾಖಲೆ

ನವದೆಹಲಿ: ಭಾರತೀಯ ರೈಲ್ವೆ ಶುಕ್ರವಾರ 4.5 ಕಿ.ಮೀ. ಉದ್ಧದ ಗೂಡ್ಸ್ ರೈಲು ಓಡಿಸುವ ಮೂಲಕ ಹೊಸ ದಾಖಲೆ ಬರೆದಿದೆ. 6 ಸಾಮಾನ್ಯ ಗೂಡ್ಸ್ ರೈಲುಗಳನ್ನು ಒಟ್ಟಾಗಿಸಿ, ರುದ್ರಾಸ್ತ್ರ ಹೆಸರಿನ ಒಂದೇ ರೈಲಿನ ರೀತಿಯಲ್ಲಿ ಮಾರ್ಪಡಿಸಿ ಅದರ ಸಂಚಾರ ನಡೆಸಲಾಯಿತು.

6 ಎಂಜಿನ್, 354 ಬೋಗಿ ಒಳಗೊಂಡ ಈ ರೈಲು ಉತ್ತರ ಪ್ರದೇಶದ ಗಂಜ್‌ಖ್ವಾಜಾದಿಂದ ಜಾರ್ಖಂಡ್‌ನ ಗದ್ವಾ ತನಕ 200 ಕಿ.ಮೀ.ಸಂಚಾರ ನಡೆಸಿದೆ. ಈ ಮೂಲಕ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಸರಕನ್ನು ಸಾಗಿಸಿ, ಸಮಯವನ್ನು ಉಳಿಸಿದೆ. ಒಂದು ವೇಳೆ 6 ರೈಲುಗಳನ್ನು ಪ್ರತ್ಯೇಕವಾಗಿ ಓಡಿಸಬೇಕಿದ್ದರೆ, ಅದಕ್ಕೆ ಸುಮಾರು 6 ಗಂಟೆಗೂ ಹೆಚ್ಚು ಅವಧಿ ಹಿಡಿಯುತ್ತಿತ್ತು.
