Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದಾವಣಗೆರೆಯ 36 ನಿರಾಶ್ರಿತ ಕುಟುಂಬಗಳಿಗೆ ಸಿಕ್ಕಿತು ನಿವೇಶನ ಭಾಗ್ಯ!

Spread the love

ದಾವಣಗೆರೆ: ನಗರದಲ್ಲಿ (Davanagere) ಕಳೆದ ಅ.11 ರಂದು ಮನೆಗಳು ತೆರವುಗೊಂಡು ನಿರಾಶ್ರಿತರಾಗಿದ್ದ 36 ಕುಟುಂಬಗಳಿಗೆ `ಪಬ್ಲಿಕ್ ಟಿವಿ’ (Public Tv) ವರದಿ ಬಳಿಕ ಸೂರಿನ ಭಾಗ್ಯ ಒದಗಿ ಬಂದಿದೆ.

ನಗರದ ಲೋಕಿಕೆರೆ ರಸ್ತೆಯ ರವೀಂದ್ರನಾಥ್ ಬಡಾವಣೆಯ ಸರ್ಕಾರಿ ಜಾಗದಲ್ಲಿ ವಾಸವಾಗಿದ್ದ 36 ಕುಟುಂಬಗಳ ಮನೆಗಳನ್ನು ತೆರವು ಮಾಡಲಾಗಿತ್ತು. ನಿರಾಶ್ರಿತರನ್ನು ತುರ್ಚಘಟ್ಟ ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಮೂರು ತಿಂಗಳಾದರೂ ಸೂರಿನ ವ್ಯವಸ್ಥೆ ಕಲ್ಪಿಸದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು

ಬೆಂಗಳೂರಿನ ಕೋಗಿಲು ನಿರಾಶ್ರಿತರಿಗೆ ಮಿಡಿದ ಹೃದಯಗಳು ದಾವಣಗೆರೆಯ 36 ಬಡ ಕುಟುಂಬಗಳ ಕಷ್ಟಕ್ಕೆ ಮಿಡಿಯಲಿಲ್ಲ ಎಂದು ಈ ಬಗ್ಗೆ `ಪಬ್ಲಿಕ್ ಟಿವಿ’ ವರದಿ ಬಿತ್ತರಿಸಿತ್ತು. ವರದಿ ಬೆನ್ನಲ್ಲೇ ಇಂದು ಎಸ್‍ಓಜಿ ಕಾಲೋನಿಯಲ್ಲಿ 36 ಕುಟುಂಬಗಳಿಗೆ ನಿವೇಶನ ನೀಡಲು ಪಾಲಿಕೆ (Davanagere City Corporation) ಮುಂದಾಗಿದೆ.

ಇಂದು ಜ.2 ಬೆಳಗ್ಗೆಯಿಂದಲೇ ಪಾಲಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ನಿವೇಶನ ಅಳತೆ ಮಾಡುತ್ತಿದ್ದಾರೆ. ನಿವೇಶನ ನೀಡಿದ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಾಗೂ ವರದಿ ಮಾಡಿದ್ದ `ಪಬ್ಲಿಕ್ ಟಿವಿ’ಗೆ ಜನ ಧನ್ಯವಾದ ತಿಳಿಸಿದ್ದಾರೆ. 


Spread the love
Share:

administrator

Leave a Reply

Your email address will not be published. Required fields are marked *