33 ಸೆಕೆಂಡ್ ನಲ್ಲಿ ₹33 ಲಕ್ಷ ಕಳವು -ಆರೋಪಿಯ ಬಂಧನ

ಹಾವೇರಿ: ಕಾರ್ನ ಹಿಂಭಾಗದ ಸೀಟ್ನಲ್ಲಿ ಇಟ್ಟಿದ್ದ 33 ಲಕ್ಷ ಹಣವನ್ನು ಕಳ್ಳರು ಕೇವಲ 33 ಸೆಕೆಂಡ್ನಲ್ಲಿ ಕದ್ದು ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಹಾವೇರಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ಎಸ್ಪಿ ಅಂಶುಕುಮಾರ್ ತಿಳಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಎ.ಜಗದೀಶ್ (28) ಬಂಧಿತ ಆರೋಪಿಯಾಗಿದ್ದಾನೆ. ಕಳ್ಳರ ಕೈಚಳಕದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸದ್ಯ ಆರೋಪಿಯಿಂದ 30 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.
ಘಟನೆಯ ವಿವರ:
ಮಾ.6ರಂದು ಸಂಜೆ 4 ಗಂಟೆ ಸುಮಾರಿಗೆ ಸಂತೋಷ್ ಹಿರೇಮಠ ಎಂಬವರು ಹಣ ಕಳೆದುಕೊಂಡಿದ್ದರು. ಈ ಘಟನೆ ಹಾವೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಬ್ಯಾಂಕಿನಿಂದ 33 ಲಕ್ಷ ಹಣವನ್ನು ಡ್ರಾ ಮಾಡಿ ಅದನ್ನು ಕಾರಿನ ಹಿಂಭಾಗದ ಸೀಟ್ನಲ್ಲಿ ಹಿಟ್ಟಿದ್ದರು. ಬಳಿಕ ಕಾರನ್ನು ಮನೆಯ ಮುಂಭಾಗವೇ ಪಾರ್ಕ್ ಮಾಡಿದ್ದರು. ಇದನ್ನು ಗಮನಿಸಿದ ಕಳ್ಳರು ಯಾರೂ ಇಲ್ಲದ ವೇಳೆ ಕೇವಲ 33 ಸೆಕೆಂಡ್ನಲ್ಲಿ ಕಾರ್ನ ಗ್ಲಾಸ್ ಅನ್ನು ಪುಡಿ ಮಾಡಿ ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ಎರಡು ಬೈಕ್ನಲ್ಲಿ ನಾಲ್ಕು ಜನ ಕಳ್ಳರು ಬಂದು ಈ ಕೃತ್ಯ ವೆಸಗಿದ್ದಾರೆ. ಹಣ ಕಳ್ಳತನ ಮಾಡುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಾವೇರಿ ಪೊಲೀಸ್ ಠಾಣೆಯಲ್ಲಿ ಈ ಕೇಸ್ ದಾಖಲಾಗಿತ್ತು. ಇದೀಗ ಓರ್ವ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.