Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಾಜ್ಯದಲ್ಲಿ 3.82 ಲಕ್ಷ ಮೊಬೈಲ್‌ ಕಳೆದುಹೋದ ಪ್ರಕರಣಗಳು; 2.06 ಲಕ್ಷ ಮೊಬೈಲ್‌ಗಳು ಪತ್ತೆ

Spread the love

Jamshedpur snatching : नॉर्दर्न टाउन में महिला से छिनतई, अपराधियों की पहचान  में जुटी पुलिस | Sharp Bharat

ಬೆಂಗಳೂರು: ರಾಜ್ಯದಲ್ಲಿ ಇದುವರೆಗೂ 3,82,692 ಮೊಬೈಲ್‌ ಕಳೆದುಹೋದ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 2,06,330 ಮೊಬೈಲ್‌ ಗಳನ್ನು ಪತ್ತೆ ಮಾಡಲಾಗಿದೆ.
ಇನ್ನು 78,832 ಮೊಬೈಲ್‌ ಗಳನ್ನು ವಾರಸುದಾರರಿಗೆ ಮರಳಿಸಲಾಗಿದೆ.
ಕೇಂದ್ರ ದೂರಸಂಪರ್ಕ ಇಲಾಖೆ 2023ರಲ್ಲಿ ದೇಶದಲ್ಲಿ ಜಾರಿಗೆ ತಂದಿದ್ದ ಸಿಇಐಆರ್‌(ಸೆಂಟ್ರಲ್‌ ಇಕ್ವಿಟ್‌ಮೆಂಟ್‌ ಐಡೆಂಟಿಟಿ ರಿಜಿಸ್ಟ್ರರ್‌) ಮೊಬೈಲ್‌ ಕಳೆದುಕೊಂಡ ಸಾರ್ವಜನಿಕರು ಆನ್‌ ಲೈನ್‌ ಮೂಲಕ ದೂರು ನೀಡುವ ವ್ಯವಸ್ಥೆ ಆಗಿದೆ.

2023ರಲ್ಲಿ ಸಿಇಐಆರ್‌ ಹಾಗೂ 2016ರಲ್ಲಿ ಇ-ಲಾಸ್ಟ್‌ ಪ್ರಾರಂಭವಾದ ಬಳಿಕ ಈವರೆಗೂ 2.06 ಲಕ್ಷ ಮೊಬೈಲ್‌ ಗಳನ್ನು ಪತ್ತೆ ಮಾಡಿದ್ದಾರೆ. ಮೊಬೈಲ್‌ ಕಳುವಾದ ಬಗ್ಗೆ ಇ- ಜಾಲತಾಣದಲ್ಲಿ ಪ್ರಕರಣ ದಾಖಲಾಗಿಸುತ್ತಿದೆ. ಬಂದಿರುವ ದೂರುಗಳನ್ನು ಆಧರಿಸಿ 3.82 ಲಕ್ಷ ಮೊಬೈಲ್‌ ಗಳನ್ನು ಬ್ಲಾಕ್‌ ಮಾಡಲಾಗಿದೆ.

ಮೊಬೈಲ್‌ ಜಪ್ತಿ ಮಾಡುವಲ್ಲಿ ತೆಲಂಗಾಣ (79,194) ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ (78,832) ಎರಡನೇ ಸ್ಥಾನದಲ್ಲಿದೆ. ಮೊಬೈಲ್‌ ಕಳ್ಳತನವಾದ ಬಳಿಕ ಇ-ಲಾಸ್ಟ್‌ ಆಯಪ್‌ ಮೂಲಕ ದೂರು ದಾಖಲಿಸಲಾಗುತ್ತದೆ. ಈ ದೂರು ಸಿಇಐಆರ್‌ ಆಯಪ್‌ ಗೆ ಮಾಹಿತಿ ರವಾನೆಯಾಗುತ್ತದೆ. ಸಿಇಐಆರ್‌ ಅಪ್ಲಿಕೇಷನ್‌ ನಲ್ಲಿ ಮೊಬೈಲ್‌ ನಂಬರ್‌ ಹಾಗೂ ಐಎಂಇಐ ನಂಬರ್‌ ಹಾಕಿದರೆ ಮೊಬೈಲ್‌ ಆಯಕ್ಟಿವೇಷನ್‌ ಸಂಪೂರ್ಣ ಬ್ಲಾಕ್‌ ಆಗುತ್ತದೆ. ಇನ್ನು ಅನ್‌ ಬ್ಲಾಕ್‌ ಆದರೆ ಯಾರಿಗೂ ಮೊಬೈಲ್‌ ಉಪಯೋಗಿಸಲು ಆಗುವುದಿಲ್ಲ.


Spread the love
Share:

administrator

Leave a Reply

Your email address will not be published. Required fields are marked *