Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

25 ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಕೇಂದ್ರ ಸರ್ಕಾರದಿಂದ ನಿಷೇಧ: ಅಶ್ಲೀಲ ವಿಷಯ ಪ್ರಸಾರಕ್ಕೆ ಬ್ರೇಕ್!

Spread the love

ನವದೆಹಲಿ: ಅಶ್ಲೀಲ ವಿಚಾರಗಳನ್ನು (Explicit Content) ಪ್ರಸಾರ ಮಾಡುತ್ತಿದ್ದ ಉಲ್ಲು, ALTT ಬಾಲಾಜಿ ಸೇರಿದಂತೆ 25 ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (MIB) ನಿಷೇಧಿಸಿ ಆದೇಶ ಹೊರಡಿಸಿದೆ.ಭಾರತದಲ್ಲಿ ಈ ಪ್ಲಾಟ್‌ಫಾರ್ಮ್‌ಗಳಿಗೆ ಜನರು ಭೇಟಿ ನೀಡದಂತೆ ತಡೆಯಬೇಕೆಂದು ಇಂಟರ್ನೆಟ್ ಸೇವೆಯನ್ನು (ISP) ನೀಡುವ ಕಂಪನಿಗಳಿಗೆ ಅಧಿಕೃತ ನಿರ್ದೇಶನವನ್ನು ನೀಡಲಾಗಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರ ಸೆಕ್ಷನ್ 67 ಮತ್ತು ಸೆಕ್ಷನ್ 67A, ಭಾರತೀಯ ನ್ಯಾಯ ಸಂಹಿತಾ, 2023 ರ ಸೆಕ್ಷನ್ 294,ಮಹಿಳೆಯರ ಅಸಭ್ಯ ಪ್ರದರ್ಶನ (ನಿಷೇಧ) ಕಾಯ್ದೆ 1986 ರ ಸೆಕ್ಷನ್ 4 ಉಲ್ಲಂಘಿಸಿದ್ದಕ್ಕೆ ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ.

ಐಎಸ್‌ಪಿ ಕಂಪನಿಗಳು ಐಟಿ ಕಾಯ್ದೆಯ ಸೆಕ್ಷನ್ 79(3)(b) ಪ್ರಕಾರ ಅಧಿಸೂಚನೆ ಹೊರಡಿಸಿದ ನಂತರ ಕಾನೂನುಬಾಹಿರ ವಿಷಯದ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ಆದೇಶವನ್ನು ಪಾಲಿಸಲು ವಿಫಲವಾದರೆ ವೇದಿಕೆಗಳು ಮತ್ತು ಸೇವಾ ಪೂರೈಕೆದಾರರಿಗೆ ಸಾಮಾನ್ಯವಾಗಿ ನೀಡಲಾಗುವ ಕಾನೂನು ವಿನಾಯಿತಿಯನ್ನು ತೆಗೆಯಲಾಗುತ್ತದೆ ಎಂದು ಸೂಚಿಸಲಾಗಿದೆ.

ಯಾವುದಕ್ಕೆ ನಿಷೇಧ?
ALTT, ULLU, Big Shots App, Desiflix, Boomex, Navarasa Lite, Gulab App, Kangan App, Bull App, Jalva App, Wow Entertainment, Look Entertainment, Hitprime, Feneo, ShowX, Sol Talkies, Adda TV, HotX VIP, Hulchul App, MoodX, NeonX VIP, Fugi, Mojflix, and Triflicks.MIB ಐಟಿ ಕಾಯ್ದೆಯಡಿ ಮಧ್ಯವರ್ತಿ ಬಾಧ್ಯತೆಗಳನ್ನು ಉಲ್ಲೇಖಿಸುತ್ತದೆ

ಏಪ್ರಿಲ್ ಆರಂಭದಲ್ಲಿ, OTT ಪ್ಲಾಟ್‌ಫಾರ್ಮ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿನ ಅಶ್ಲೀಲ ವಿಷಯವನ್ನು ನಿಯಂತ್ರಿಸಲು ಕಾನೂನಿನ ಮೂಲಕ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲವೇ ಎಂದು ಸುಪ್ರೀಂ ಕೋರ್ಟ್‌ (Supreme Court) ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು. ಇದಕ್ಕೆ ಸರ್ಕಾರ, ಅಶ್ಲೀಲ ಕಂಟೆಂಟ್‌ಗಳನ್ನು ನಿರ್ಬಂಧಿಸಲು ಹೆಚ್ಚುವರಿ ನಿಯಮಗಳು ಸಕ್ರಿಯ ಪರಿಗಣನೆಯಲ್ಲಿವೆ ಎಂದು ಉತ್ತರಿಸಿತ್ತು.


Spread the love
Share:

administrator

Leave a Reply

Your email address will not be published. Required fields are marked *