ರೆಡ್ಡಿಟ್ ಮುಖಾಂತರ 23 ವರ್ಷದ ಯುವತಿ ತಂದೆಯನ್ನು ಪತ್ತೆ ಹಚ್ಚಿದ ಯುವತಿ

ಬೆಂಗಳೂರಿನ ಯುವತಿ ತನ್ನ ಜೀವನದಲ್ಲಿ ನಡೆದ ಹೃದಯ ವಿದ್ರಾವಕ ಘಟನೆಯನ್ನು ಹಂಚಿಕೊಂಡಿದ್ದಾರೆ. ತನಗೆ ಎರಡು ವರ್ಷ ಇರಬೇಕಾದರೆ ಮನೆಯವರನ್ನು ಕಳೆದುಕೊಂಡು ಒಬ್ಬಂಟಿಯಾಗಿದ್ದರು, ತಂದೆಯನ್ನು ಹುಡುಕಬೇಕು, ತನ್ನ ಕುಟುಂಬವನ್ನು ಸೇರಬೇಕು ಎಂಬ ಆಸೆಯಿಂದ ರೆಡ್ಡಿಟ್ನಲ್ಲಿ ತಂದೆಯನ್ನು ಹುಡುಕಲು ಸಹಾಯ ಕೇಳಿದ್ದರು, ತನ್ನ ತಂದೆಗಾಗಿ ಪ್ರತಿದಿನ ಹಂಬಲಿಸುತ್ತಿದ್ದ ಈ ಯುವತಿ ಕೊನೆಗೂ ರೆಡ್ಡಿಟ್ ಮೂಲಕ ತನ್ನ ತಂದೆಯನ್ನು ಪತ್ತೆ ಮಾಡಿದ್ದಾರೆ. ತನ್ನ ಶಕ್ತಿ ಮೀರಿ ರೆಡ್ಡಿಟ್ ಈ 23 ವರ್ಷದ ಯುವತಿಯ ಕುಟುಂಬವನ್ನು ಹುಡುಕಲು ಸಹಾಯ ಮಾಡಿದೆ. ಟ್ರಾವೆಲ್ ಮ್ಯಾನೇಜ್‌ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ತಂದೆಯನ್ನು ಹುಡುಕಲು ಪೋಸ್ಟ್ವೊಂದು ಹಂಚಿಕೊಂಡಿದ್ದರು. ಆಕೆ ತಂದೆಗೆ ಈಗ 45 ರಿಂದ 50 ವರ್ಷ ವಯಸ್ಸಾಗಿರಬಹುದು. ಮೂಲತಃ ಕೇರಳದವರಾಗಿದ್ದರೂ, ಆ ಸಮಯದಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು.


ನಾನು ಕೇವಲ 2 ವರ್ಷದವಳಿದ್ದಾಗ ನನ್ನ ಹೆತ್ತವರು ವೈವಾಹಿಕ ಕಲಹದಿಂದ ಬೇರೆಯಾದರು. ಆದರೆ ನಾನು ಅವರಿಬ್ಬರ ಜಗಳದಿಂದ ಒಬ್ಬಂಟಿಯಾದೆ. ಅಲ್ಲಿಂದ ನನ್ನನ್ನೂ ಬೇರೆಯವರು ಸಾಕಿದ್ದಾರೆ. ನನಗೂ ನನ್ನ ಕುಟುಂಬ ಬೇಕು ಎಂದು ಹುಡುಕಲು ರೆಡ್ಡಿಟ್ ಸಹಾಯ ಪಡೆದೆ. ರೆಡ್ಡಿಟ್ ನನ್ನ ಹಾಗೂ ನನ್ನ ಕುಟುಂಬದ ಮಾಹಿತಿಯನ್ನು ಪಡೆದು ನನ್ನವರನ್ನು ಹುಡುಕಿಕೊಟ್ಟಿದೆ. ನನ್ನ ಈ ಪೋಸ್ಟ್ಗೆ ರೆಡ್ಡಿಟ್ ಬಳಕೆದಾರರು ಕೂಡ ಸಹಾಯ ಮಾಡಿದ್ದಾರೆ ಎಂದು ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ.
ಈಗ ನಾನು ನನ್ನ ತಂದೆ ಮತ್ತು ನನ್ನ ಇಡೀ ಕುಟುಂಬವನ್ನು ಪತ್ತೆ ಮಾಡಿದ್ದೇನೆ. ಆದರೆ ಇದರಲ್ಲಿ ದುಃಖಕರ ವಿಚಾರವೆಂದರೆ, ನನ್ನ ಅಜ್ಜಿ ಮತ್ತು ನನ್ನ ತಂದೆಯ ಸಹೋದರ ಈಗ ಜೀವಂತವಾಗಿಲ್ಲ. ಒಬ್ಬ ಚಿಕ್ಕಪ್ಪ ಮಾತ್ರ ಇದ್ದಾರೆ. ಮಲಯಾಳಂ ಮಾತನಾಡುವ ನನ್ನ ಸ್ನೇಹಿತನ ಸಹಾಯದಿಂದ ನಾನು ಅವರೊಂದಿಗೆ ಕರೆಯ ಮೂಲಕ ಮಾತನಾಡಿದೆ. ನಾನು ಅವರನ್ನು ಈಗ ಸೇರುತ್ತಿದ್ದೇನೆ. ತುಂಬಾ ಖುಷಿಯಾಗಿದೆ ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್ನಲ್ಲಿ, ಯುವತಿ ತನ್ನ ತಂದೆ ಮೊದಲ ಬಾರಿಗೆ ನನ್ನ ಜತೆ ಮಾತನಾಡಿದ ಬಗ್ಗೆಯೂ ಇಲ್ಲಿ ಹೇಳಿಕೊಂಡಿದ್ದಾರೆ, ನನ್ನ ಧ್ವನಿಯನ್ನು ಕೇಳಿದಾಗ ನನ್ನ ತಂದೆ ಅಳುತ್ತಿದ್ದರು, ಇವತ್ತಿನವರೆಗೂ ಅವರು ಬೇರೆ ಮದುವೆಯಾಗಿಲ್ಲ. ಪ್ರಸ್ತುತ ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಕಳೆದ 4 ವರ್ಷಗಳಿಂದ ಕೇರಳಕ್ಕೆ ಹೋಗಿಲ್ಲ. ಇದು ತುಂಬಾ ಭಾವನಾತ್ಮಕ ಕ್ಷಣವಾಗಿತ್ತು, ಮತ್ತು ನಾನು ನಂಬಲಾಗದಷ್ಟು ಕೃತಜ್ಞನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇನ್ನು ರೆಡ್ಡಿಟ್ ಬಳಕೆದಾರರೂ ಮೊದಲು ಆಕೆ ಹಂಚಿಕೊಂಡ ಪೋಸ್ಟ್ ಬಗ್ಗೆ ಬೆಂಬಲ ವ್ಯಕ್ತಪಡಿಸಿದ್ದರು, ನಂತರ ನನ್ನ ತಂದೆ ಸಿಕ್ಕಿದ್ದರೆ ಎಂಬ ವಿಚಾರವನ್ನು ಹಂಚಿಕೊಂಡಾಗ, ಆಕೆ ಸಂತೋಷದಲ್ಲಿ ಬಳಕೆದಾರರೂ ಕೂಡ ಭಾಗಿಯಾಗಿದ್ದಾರೆ. ಒಬ್ಬ ಬಳಕೆದಾರ ಡ್ಯೂಡ್ ಇದು ಒಳ್ಳೆಯ ಸುದ್ದಿ ಎಂದು ಹೇಳಿಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರ ನೀವು ನಿಮ್ಮ ತಂದೆಯನ್ನು ಭೇಟಿಯಾದಾಗ ಅವರ ಜತೆಗೆ ಇರುವ ಒಂದು ಫೋಟೋವನ್ನು ಇಲ್ಲಿ ಹಂಚಿಕೊಳ್ಳಿ ಎಂದು ಹೇಳಿದ್ದಾರೆ.