2025 ಯುದ್ಧ ಭೀತಿ: ಬಾಬಾ ವಂಗಾ ನುಡಿದ ಭವಿಷ್ಯವಾಣಿ ಮತ್ತೆ ನಿಜವಾಗುತ್ತಿದೆ

ಭಾರತ ಹಾಗೂ ಪಾಕ್ ನಡುವೆ ಯುದ್ಧ ಭೀತಿ ಆರಂಭಗೊಂಡಿದೆ. ಅದರಲ್ಲೂ ಭಾರತ ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಆರಂಭಿಸಿದೆ. ಹೀಗಾಗಿ ಪಾಕ್ ನೆಲದಲ್ಲಿ ಆತಂಕ ಮನೆ ಮಾಡಿದೆ. ಈಗಾಗಲೆ ಉಗ್ರರ ಅಡಗು ತಾಣಗಳು, ಶಬಿರಗಳು ಸೇರಿ ಹಲವು ಕಡೆ ದಾಳಿಯಾಗಿದೆ.

ಈ ಸಂಬಂಧ ಅಧಿಕೃತ ವರದಿಗಳಾಗಿವೆ.
ಈ ದಾಳಿಯ ನಡುವೆಯೂ ಎರಡು ರಾಜ್ಯಗಳ ನಡುವಿನ ಯುದ್ಧ ಭೀತಿ ಹೆಚ್ಚಾಗಿದೆ. ಆದ್ರೆ ಹಲವು ವಿಶ್ಲೇಷಕರು ಈ ಅಭಿವೃದ್ಧಿಯಿಂದ ಅಚ್ಚರಿಗೊಂಡಿಲ್ಲ. ಏಕೆಂದರೆ ಭಾರತ ಮತ್ತು ಪಾಕ್ ನಡುವೆ ಯುದ್ಧ ಕುರಿತಾಗಿ ಮೊದಲೇ ಸೂಚನೆ ಇರುವ ಕುರಿತಾಗಿ ಈಗ ಸುದ್ದಿ ಹರಿದಾಡುತ್ತಿದೆ. ಅದರಲ್ಲೂ ಪ್ರಸಿದ್ದ ಬಲ್ಗೇರಿಯನ್ ಅತೀಂದ್ರಿಯ ಶಕ್ತಿ ಹೊಂದಿದ್ದ ಬಾಬಾ ವಂಗಾ ಈ ಕುರಿತು ಭವಿಷ್ಯ ನುಡಿದಿರುವ ಕುರಿತು ನಿಮಗೆ ತಿಳಿದಿದ್ಯಾ?
2025ಲ್ಲಿ ಈ ಯುದ್ದ ಕುರಿತಾಗಿ ಆಕೆ ಹೇಳಿರುವ ಭವಿಷ್ಯವೊಂದು ಈಗ ಮತ್ತೆ ಚರ್ಚೆ ಹುಟ್ಟುಹಾಕಿದೆ. ಆಕೆ ಸಂಭಾವ್ಯ ಯುದ್ದ ಕುರಿತು ಅಧಿಕೃತ ಹೆಸರುಗಳ ಹೇಳದೆಯೇ ಈ ಕುರಿತು ಹೇಳಿರುವ ಭವಿಷ್ಯ ಈಗ ಬಹಳ ವೈರಲ್ ಆಗುತ್ತಿದೆ. ನ್ಯೂಯಾರ್ಕ್ ಪೋಸ್ಟ್ನ ವರದಿಯ ಪ್ರಕಾರ, ಬಾಬಾ ವಂಗಾ ಯುರೋಪಿನ ಅಡಿಪಾಯ ಅಲುಗಾಡುವಂತಹ ಸಂಘರ್ಷ ನಡೆಯಲಿದೆ ಎಂದು ಕೂಡ ಅವರು ಭವಿಷ್ಯ ನುಡಿದಿದ್ದರು.
2025ರಲ್ಲಿ ಯುದ್ಧ ಭೀತಿ
ಬಾಬಾ ವಂಗಾ ಈ ಮೊದಲು 2025ರಲ್ಲಿ ಜಾಗತಿಕ ಯುದ್ಧಗಳು ಹೆಚ್ಚಾಗಲಿದೆ ಎಂದಿದ್ದರು. ಅದರಲ್ಲು ರಷ್ಯಾ, ಉಕ್ರೇನ್ ನಡುವೆ ಈಗಾಗಲೇ ವಿನಾಶಕಾರಿ ಮಟ್ಟದಲ್ಲಿ ಯುದ್ದ ನಡೆಯುತ್ತಿದೆ. ಹಾಗೆ ಗಾಜಾ-ಇಸ್ರೇಲ್, ಅರಾಜಕತೆ ಸೇರಿದಂತೆ ಈಗ ಭಾರತ ಮತ್ತು ಪಾಕ್ ನಡುವಿನ ಭೀತಿಯು ಸೇರಿದೆ. ಈ ಸಂಬಂಧ ಬಾಬಾ ವಂಗಾ ಮೊದಲೇ ಎಚ್ಚರಿಸಿದ್ದರು.
ಬಲ ಪ್ರದರ್ಶನ ಸಂಬಂಧ ಜಾಗತಿಕ ಯುದ್ಧ ಸಂಭವಿಸಬಹುದು ಎಂದು ಹೇಳಿದ್ದಾರೆ. ಆದರೆ ನಿರ್ಧಿಷ್ಟವಾಗಿ ಯಾವ ರಾಷ್ಟ್ರಗಳ ನಡುವೆ ಯುದ್ಧ ಸಂಭವಿಸಲಿದೆ ಎಂಬುದನ್ನು ಅವರು ಹೇಳಿರಲಿಲ್ಲ, ಆದ್ರೆ 2025ರಲ್ಲಿ ಯುದ್ದಾಂತಕಗಳು ಹೆಚ್ಚಾಗಲಿದೆ ಎಂಬುದು ಆಕೆ ನುಡಿದಿರುವ ಭವಿಷ್ಯವಾಣಿಯಾಗಿತ್ತು. ಈ ಭವಿಷ್ಯವಾಣಿ ಈಗ ನಿಜವಾಗುತ್ತಿದೆ. ಭಾರತ ಪಾಕ್ ನಡುವಿನ ಸಂಬಂಧ ಮತ್ತಷ್ಟು ಕೆಟ್ಟಿದ್ದು, ಈಗ ಯುದ್ಧ ಆತಂಕ ಹೆಚ್ಚಾಗುತ್ತಿದೆ.
ಯುದ್ದದ ಜೊತೆಗೆ ಹಲವು ವಿನಾಶಕಾರಿ ಘಟನೆ ಭವಿಷ್ಯ
ಯುದ್ದ ಆತಂಕಗಳು ಮಾತ್ರವಲ್ಲದೆ ನೈಸರ್ಗಿಕ ವಿಕೋಪಗಳು ನಡೆಯುವ ಕುರಿತಾಗಿಯೂ ಆಕೆ ಭವಿಷ್ಯ ನುಡಿದಿರುವುದು ನೋಡಬಹುದು. ಅದರಲ್ಲಿ ಕೆಲವೊಂದು ನೈಸರ್ಗಿಕ ವಿಕೋಪ ಕುರಿತ ಭವಿಷ್ಯ ನಿಜವಾಗಿದೆ. ಮಾರ್ಚ್ 28ರಂದು ಮ್ಯಾನ್ಮಾರ್ನಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿ 1,700 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದನ್ನು ನೆನೆಯಬಹುದು. ಹಾಗೆ ಥೈಲ್ಯಾಂಡ್ನಲ್ಲೂ ಭೂಕಂಪನ ಸಂಭವಿಸಿ 10 ಮಂದಿ ಮೃತಪಟ್ಟಿದ್ದರು.
ಯಾರು ಈ ಬಾಬಾ ವಂಗಾ?
1911 ರಲ್ಲಿ ಬಲ್ಗೇರಿಯಾದಲ್ಲಿ ಜನಿಸಿದ ಬಾಬಾ ವಂಗಾ ಅವರನ್ನು ಮೂಲತಃ ವಾಂಜೆಲಿಯಾ ಪಾಂಡೇವಾ ಗುಶ್ಟೆರೋವಾ ಎಂದು ಹೆಸರಿಸಲಾಯಿತು. ಆಕೆ 12ನೇ ವಯಸ್ಸಿನಲ್ಲಿ ಚಂಡಮಾರುತದಲ್ಲಿ ದೃಷ್ಟಿ ಕಳೆದುಕೊಂಡಳು, ಇದಾದ ಬಳಿಕ ಅತೀಂದ್ರಿಯ ಶಕ್ತಿ ಪಡೆದಿರುವುದಾಗಿ ಹೇಳಿಕೊಂಡಿದ್ದಳು. ಹಾಗೆ 1996ರಲ್ಲಿ ಮೃತಪಟ್ಟರು, ಆದ್ರೆ ಇದಕ್ಕೂ ಮೊದಲೇ ಶತಮಾನಗಳ ಮುಂದೆ ಏನೆಲ್ಲಾ ನಡೆಯಲಿದೆ ಎಂಬುದನ್ನು ಆಕೆ ಭವಿಷ್ಯ ನುಡಿದಿದ್ದರು.
ಸದ್ಯ 2025ರ ಅವರ ಭವಿಷ್ಯವಾಣಿಗಳು ಒಂದೊಂದಾಗಿ ನಿಜವಾಗುತ್ತಿದೆ. ಇದು ಎಲ್ಲರಲ್ಲೂ ಆತಂಕ ಹೆಚ್ಚಾಗಲು ಕಾರಣವಾಗಿದೆ. ಸದ್ಯ ಈಗ ಪಾಕಿಸ್ತಾನದೊಂದಿಗಿನ ಯುದ್ದ ಭೀತಿ ಹೆಚ್ಚಾಗಿದ್ದು ಈ ಕುರಿತ ಭವಿಷ್ಯ ಕೂಡ ನಿಜವಾಗುತ್ತಿದೆ.