Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

2025ರ ಸಾಹಿತ್ಯ ನೊಬೆಲ್ ಪ್ರಶಸ್ತಿ: ಹಂಗೇರಿಯನ್ ಲೇಖಕ ಲಾಸ್ಜ್ಲೋ ಕ್ರಾಸ್ಜ್ನಾಹೋರ್ಕೈಗೆ ಗೌರವ

Spread the love

ಹಂಗೇರಿಯನ್ ಲೇಖಕ ಲಾಸ್ಜ್ಲೋ ಕ್ರಾಸ್ಜ್ನಾಹೋರ್ಕೈ (László Krasznahorkai) ಅವರಿಗೆ 2025ರ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ನೀಡಲಾಗಿದೆ. “for his compelling and visionary oeuvre that, in the midst of apocalyptic terror, reaffirms the power of art” ಎಂಬ ಕೃತಿಗೆ ಈ ಪ್ರಶಸ್ತಿಯನ್ನು ನೀಡಿಲಾಗಿದೆ. ಈ ಕೃತಿಯ ಮೂಲಕ ಸಮಕಾಲೀನ ಜೀವನದ ಸಾರವನ್ನು ಜಗತ್ತಿಗೆ ತೋರಿಸಿದ ಹಾಗೂ ನಮ್ಮ ಕಾಲದ ಭಯೋತ್ಪಾದನೆ ಮತ್ತು ದುರ್ಬಲತೆಯನ್ನು ಎತ್ತಿ ತೋರಿಸುತ್ತದೆ, ಮುಂದಿನ ಪೀಳಿಗೆಯ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವ ಬಗ್ಗೆ ಈ ಕೃತ್ತಿಗಳಲ್ಲಿ ಈ ಸಮಾಜಕ್ಕೆ ತೋರಿಸಿದ್ದಾರೆ. ತಮ್ಮ ಕೃತಿಯ ಮೂಲಕ ನಿರೂಪಣಾ ಶೈಲಿ ಮತ್ತು ತಾತ್ವಿಕದ ಬಗ್ಗೆ ಆಳವಾದ ಪ್ರಭಾವವನ್ನು ಉಂಟು ಮಾಡಿದವರು, ಕ್ರಾಸ್ನಾಹೋರ್ಕೈ ಅವರ ಕೃತಿಗಳು ಆಧುನಿಕ ಸಾಹಿತ್ಯಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದೆ. ಅವರ ಬರವಣಿಗೆಯು ಜಗತ್ತಿನಲ್ಲಿರುವ ಹಲವು ಸಮಸ್ಯೆಗಳಿಗೆ ಪರಿಹಾರವಾಗಿ ನಿಂತಿದೆ.

ಹಲವು ಬಿಕ್ಕಟ್ಟಿನಲ್ಲಿರುವ ದೇಶಗಳಿಗೆ ಹಾಗೂ ಅಲ್ಲಿನ ಕಲೆ ಅವ್ಯವಸ್ಥೆ ಮತ್ತು ಹತಾಶೆ, ಧಿಕ್ಕರಿಸುವ ವಿಚಾರಗಳಿಗೆ ಅವರ ಕೃತಿ ಶಕ್ತಿಯಾಗಿ ನಿಂತಿದೆ. ಈ ಬಾರಿ ಸಾಹಿತ್ಯ ನೊಬೆಲ್ ಪ್ರಶಸ್ತಿಯಲ್ಲಿ ಭಾರತದ ಸಾಹಿತಿಗಳು ಕೂಡ ಸ್ವರ್ಧಿಸಿದ್ದಾರೆ. ಭಾರತದ ಅಮಿತವ್ ಘೋಷ್ ಹಾಗೂ ಸಲ್ಮಾನ್ ರಶ್ದಿ ಹೆಸರು ಕೂಡ ಕೇಳಿ ಬಂದಿದೆ. ವಿಶ್ವ ಸಾಹಿತ್ಯ ವೇದಿಕೆಯಲ್ಲಿ ಪ್ರಭಾವ ಬೀರಿದ ಲೇಖಕರು ಇವರುಗಳು. ಅಮಿತವ್ ಘೋಷ್ ಅವರ The Shadow Lines, The Hungry Tide ಮುಂತಾದ ಕೃತಿಗಳು ಭಾರತೀಯ ಇತಿಹಾಸ, ವಲಸೆ, ಮತ್ತು ಪರಿಸರ ಚಿಂತನೆಗಳ ಬಗ್ಗೆ ಹೆಚ್ಚು ಪ್ರಭಾವ ಉಂಟು ಮಾಡಿದೆ.

ರಶ್ದಿ ಅವರ Midnight’s Children ಮತ್ತು The Satanic Verses ಕೃತಿಗಳು ಬಹದೊಡ್ಡ ಬದಲಾವಣೆಗಳನ್ನು ತಂದಿದೆ. ಈ ಮೂಲಕ ಇಂಗ್ಲಿಷ್ ಕೃತಿಗಳ ಮೇಲೆ ಹೆಚ್ಚು ಪ್ರಭಾವ ಉಂಟು ಮಾಡಿದೆ. 1913 ಭಾರತಕ್ಕೆ ಮೊದಲು ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿ ದೊರಕಿತ್ತು. ಅದು ರವೀಂದ್ರನಾಥ ಟ್ಯಾಗೋರ್’ ಅವರ ‘ಗೀತಾಂಜಲಿ’ ಕೃತಿಗೆ. ನಂತರದಲ್ಲಿ ಭಾರತದ ಹಲವು ಕೃತಿಗಳು ವಿಶ್ವಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆದರು ಇಲ್ಲಿಯವರಗೆ ಯಾವುದೇ ನೊಬೆಲ್ ಪ್ರಶಸ್ತಿ ಸಿಕ್ಕಿಲ್ಲ.


Spread the love
Share:

administrator

Leave a Reply

Your email address will not be published. Required fields are marked *