2000ರ ಶೂಟೌಟ್ ಆಘಾತ: ‘ನನ್ನನ್ನು ಕೊಲ್ಲಬಹುದು’ ಎಂದಿದ್ದ ರಾಕೇಶ್ ರೋಷನ್

ಬಾಲಿವುಡ್ನ ಹಿರಿಯ ನಟ – ನಿರ್ದೇಶಕ ರಾಕೇಶ್ ರೋಷನ್ 2000ರಲ್ಲಿ ನಡೆದ ಆಘಾತಕಾರಿ ಶೂಟೌಟ್ ಘಟನೆ ಬಗ್ಗೆ ಮಾತನಾಡಿದ್ದಾರೆ. ಅದೊಂದು ಭಯಾನಕ ಅವಧಿ. ನಮ್ಮನ್ನು ಸಂಪೂರ್ಣವಾಗಿ ಬೆಚ್ಚಿಬೀಳಿಸಿತ್ತೆಂದು ಬಹಿರಂಗಪಡಿಸಿದರು.
ಮಗ ಹೃತಿಕ್ ರೋಷನ್ ಅವರ ಚೊಚ್ಚಲ ಚಿತ್ರ ‘ಕಹೋ ನಾ…ಪ್ಯಾರ್ ಹೈ’ ತೆರೆಕಂಡು ಭರ್ಜರಿ ಯಶಸ್ಸು ಗಳಿಸಿದ ನಂತರ ಈ ದಾಳಿ ನಡೆಯಿತು. ಹೃತಿಕ್ ನಟನೆಯ ಮೊದಲ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಆದರೆ ರಾಕೇಶ್ ರೋಷನ್ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದರು. ಈ ಘಟನೆ ರೋಷನ್ ಕುಟುಂಬ ಬೆಚ್ಚಿಬೀಳಿಸಿತ್ತು.
ಇತ್ತೀಚೆಗೆ ಸುದ್ದಿ ಸಂಸ್ಥೆಯೊಂದರೊಂದಿಗೆ ಮಾತನಾಡಿದ ರಾಕೇಶ್ ರೋಷನ್, ಭಯಾನಕ ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡರು. 2000ರ ಶೂಟೌಟ್ ಘಟನೆ ಬಳಿಕ ತಮ್ಮ ರಕ್ಷಣೆಗಾಗಿ ಇಬ್ಬರು ಸಶಸ್ತ್ರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಯಿತು. ಹೆಚ್ಚಿದ ಭದ್ರತೆಯಿಂದ ಧೈರ್ಯ ತೆಗೆದುಕೊಳ್ಳುವ ಬದಲು, ತಮ್ಮನ್ನು ರಕ್ಷಿಸುತ್ತಿರುವ ಜನರೇ ತಮ್ಮ ಮೇಲೆ ತಿರುಗಿಬೀಳಬಹುದು ಎಂಬ ಭಯ ನಿರಂತರವಾಗಿತ್ತೆಂದು ರೋಷನ್ ಬಹಿರಂಗಪಡಿಸಿದರು.
ಇದೇ ವೇಳೆ, ತಮ್ಮ ಕಾರಿನ ಹಿಂಬದಿ ಸೀಟಿನಲ್ಲಿ ಬಾಡಿ ಗಾರ್ಡ್ಸ್ ಹೇಗೆ ಕುಳಿತುಕೊಳ್ಳುತ್ತಿದ್ದರು ಮತ್ತು ತಾವು ಮುಂದಿನ ಸೀಟಿನಲ್ಲಿ ಕುಳಿತುಕೊಳ್ಳುತ್ತಿದ್ದದ್ದನ್ನು ನೆನಪಿಸಿಕೊಂಡರು. ಈ ಸೆಕ್ಯೂರಿಟಿ, ಸೇಫ್ಟಿ ಫೀಲ್ ಕೊಡೋ ಬದಲು ರಾಕೇಶ್ ಅವರನ್ನು ಮತ್ತಷ್ಟು ಹೆದರಿಸಿತ್ತು. “ಆ ಇಬ್ಬರು ನನ್ನ ಹಿಂದೆ ಗನ್ ಹಿಡಿದು ಕುಳಿತಿದ್ದಾರೆ. ಏನಾದರೂ ಸಂಭವಿಸಿದ್ರೆ, ಅವರು ನನ್ನನ್ನು ಕೊಲ್ಲಬಹುದು” ಎಂದು ಭಯಭೀತರಾಗಿದ್ದನ್ನು ಬಹಿರಂಗಪಡಿಸಿದರು
ನಿರಂತರ ಕಣ್ಗಾವಲಿನಿಂದಾಗಿ ಕ್ಲಾಸ್ಟ್ರೋಫೋಬಿಕ್ ಅನಿಸುತ್ತಿದ್ದೆಂದು ಕರಣ್ ಅರ್ಜುನ್ ನಿರ್ದೇಶಕ ತಿಳಿಸಿದರು. ನಿರ್ದೇಶಕರ ಪ್ರತೀ ಹೆಜ್ಜೆಯನ್ನೂ ಭದ್ರತಾ ಸಿಬ್ಬಂದಿ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಅವರು ಬೀಚ್ ಬಳಿ ನಡೆಯುವಾಗಲೂ ಅವರೊಂದಿಗೆ ಹೋಗುತ್ತಿದ್ದರು. ಆ ಲೈಫ್ಸ್ಟೈಲ್ ತಮ್ಮ ಮೇಲೆ ಪರಿಣಾಮ ಬೀರಿತು. ಫೈನಲಿ, ಭದ್ರತೆ ತೆಗೆದುಹಾಕುವಂತೆ ಕೇಳಿಕೊಂಡೇ ಎಂಬುದನ್ನು ತಿಳಿಸಿದರು.