₹2,000 ನೋಟು ಹಿಂಪಡೆದು 2 ವರ್ಷವಾದರೂ, ಸಾವಿರಾರು ಕೋಟಿ ರೂಪಾಯಿ ಮೌಲ್ಯದ ನೋಟುಗಳು ಇನ್ನೂ ಬಳಕೆಯಲ್ಲೇ

2,000 ಮುಖಬೆಲೆಯ ನೋಟುಗಳು ಎರಡು ವರ್ಷಗಳ ಹಿಂದೆಯೇ ಹಿಂಪಡೆದರೂ ಕೂಡ ಇನ್ನೂ ಜನರು ಬಳಿಯೇ ಸಾಕಷ್ಟ ಹಣ ಉಳಿದುಕೊಂಡಿದೆ ಎಂದು ಆರ್ ಬಿಐ ಅಧಿಕೃತ ದತ್ತಾಂಶಗಳು ಮಾಹಿತಿಯನ್ನು ತಿಳಿಸಿವೆ.ಹಾಗಿದ್ದರೆ ಸಾರ್ವಜನಿಕರ ಬಳಿ ಇನ್ನು ಎಷ್ಟು ಕೋಟಿ ರೂಪಾಯಿಗಳು ಉಳಿದುಕೊಂಡಿದೆ ಎಂಬ ಹೆಚ್ಚಿನ ವಿವರ ಇಲ್ಲಿದೆ ನೋಡಿ.

2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 2023ರ ಮೇ 19ರಂದು ಚಲಾವಣೆಯಿಂದ ಹಿಂತೆಗೆದುಕೊಂಡಿತ್ತು. ಇದರ ಬೆನ್ನಲ್ಲೇ ಸಾರ್ವಜನಿಕರು ನೋಟುಗಳನ್ನು ಬ್ಯಾಂಕುಗಳಲ್ಲಿ ವಾಪಸ್ ನೀಡಲು ಅವಕಾಶ ನೀಡಲಾಗಿತ್ತು.ಆದರೆ 2025ರ ಏಪ್ರಿಲ್ 30ರವರೆಗ ಅಂದರೆ ಈ ನೀತಿಯ ಅಂತಿಮ ದಿನದ ವಹಿವಾಟು ಮುಕ್ತಾಯದ ವೇಳೆಗೆ ಇತ್ತು.ಹಾಗಾದರೂ ಸುಮಾರು 6,266 ಕೋಟಿ ರೂಪಾಯಿ ಮೌಲ್ಯದ ನೋಟುಗಳು ಇನ್ನೂ ಸಾರ್ವಜನಿಕ ಬಳಕೆದಲ್ಲಿದ್ದೇವೆ ಎಂದು ಆರ್‌ಬಿಐ ಮಾಹಿತಿ ನೀಡಿದೆ.
2023ರ ವೇಳೆಗೆ, 2,000 ಮುಖಬೆಲೆಯ ನೋಟುಗಳ ಶೇ.98.04 ಚಲಾವಣೆಯಲ್ಲಿದ್ದವು. ಆದರೆ ಜನರಿಗೆ ಆ ನೋಟುಗಳನ್ನು ಶೀಘ್ರವಾಗಿ ವಾಪಸ್ ನೀಡುವಂತೆ ಆರ್‌ಬಿಐ ಕರೆಯನ್ನು ಸಹ ನೀಡಿತ್ತು.ಪ್ರಾರಂಭದಲ್ಲಿ ನಿಗದಿಪಡಿಸಿದ್ದ ಗಡುವಿನ ನಂತರ, ಆರ್‌ಬಿಐ 2023 ಅಕ್ಟೋಬರ್ 7ರವರೆಗೆ ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ ಈ ನೋಟುಗಳನ್ನು ಠೇವಣಿ ಮಾಡಲು ಅಥವಾ ವಿನಿಮಯ ಮಾಡಲು ಅವಕಾಶ ನೀಡಿತು. ಈ ಅವಧಿಯಲ್ಲಿ ಜನರು ತಮ್ಮ ಬಳಿಯ ನೋಟುಗಳನ್ನು ಲಭ್ಯವಿರುವ ಯಾವುದೇ ಬ್ಯಾಂಕ್ ಶಾಖೆಗೆ ತೆರಳಿ, ಠೇವಣಿ ಮಾಡಬಹುದು ಅಥವಾ ಚಿಲ್ಲರೆಯ ನೋಟಿಗೆ ವಿನಿಮಯ ಮಾಡಬಹುದು ಎಂಬ ವ್ಯವಸ್ಥೆ ಇತ್ತು. ಆದರೆ ಅಕ್ಟೋಬರ್ 7, 2023 ನಂತರ, ಈ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು, ಅಂದರೆ ಬ್ಯಾಂಕ್ ಶಾಖೆಗಳಲ್ಲಿ ನೋಟುಗಳನ್ನು ನೇರವಾಗಿ ವಿನಿಮಯ ಮಾಡುವ ಅಥವಾ ಠೇವಣಿ ಮಾಡುವ ಅವಕಾಶವಿಲ್ಲ.
ಈ ಬಳಿಕ ಜನರು ತಮ್ಮ 2,000 ಮುಖಬೆಲೆಯ ನೋಟುಗಳನ್ನು ಕೆಲವೊಂದು ಆಯ್ಕೆಯಾದ ಆರ್‌ಬಿಐ ಕಚೇರಿಗಳಲ್ಲಿ ಮಾತ್ರ (ಪತ್ರವಾಹಕ ಮೂಲಕ ಅಥವಾ ನೇರವಾಗಿ) ಸಲ್ಲಿಸಬಹುದಾದ ವ್ಯವಸ್ಥೆ ಮುಂದುವರಿಸಲಾಯಿತು. ಇದರಿಂದ, ನೋಟು ಹಿಂಪಡೆದು ಎರಡು ವರ್ಷವಾದರೂ, ಇನ್ನೂ 6,266 ಕೋಟಿ ಮೌಲ್ಯದ ನೋಟುಗಳು ಸಾರ್ವಜನಿಕರ ಬಳಿ ಉಳಿದುಕೊಂಡಿದೆ.
2023 ಅಕ್ಟೋಬರ್ 9ರಿಂದ ಆರ್‌ಬಿಐ ₹2,000 ಮುಖಬೆಲೆಯ ನೋಟುಗಳನ್ನು ಸರಳವಾಗಿ ಸ್ವೀಕರಿಸುವುದಿಲ್ಲ, ಅಂದರೆ ನೇರವಾಗಿ ಬ್ಯಾಂಕ್ ಶಾಖೆಗಳಲ್ಲಿ ಈ ನೋಟುಗಳನ್ನು ವಿನಿಮಯ ಮಾಡುವುದು ಅಥವಾ ಠೇವಣಿ ಮಾಡುವುದು ಸಾಧ್ಯವಿಲ್ಲ. ಆರ್‌ಬಿಐ ನಿಟ್ಟಿನಲ್ಲಿ, ಈ ನೋಟುಗಳನ್ನು ಆರ್‌ಬಿಐನ ಆಯ್ಕೆಯಾದ ಕಚೇರಿಗಳಲ್ಲಿ ಮಾತ್ರ ವಾಪಸ್ ಮಾಡಬಹುದಾಗಿದೆ, ಅದೂ ಖಾತೆಗಳಲ್ಲಿ ಠೇವಣಿ ಮಾಡುವ ರೂಪದಲ್ಲಿ ಮಾತ್ರ, ನಗದು ವಿನಿಮಯದ ರೂಪದಲ್ಲಿ ಅಲ್ಲ.
ಸಾರ್ವಜನಿಕರ ಅನುಕೂಲಕ್ಕಾಗಿ, RBI ಈ ನೋಟುಗಳನ್ನು ಇಂಡಿಯಾ ಪೋಸ್ಟ್ ಮೂಲಕವೂ (ಅಂಚೆ ಮೂಲಕ) ತಮ್ಮ RBI ಖಾತೆಗೆ ಠೇವಣಿ ಮಾಡಲು ಅವಕಾಶ ನೀಡಿದೆ. ವ್ಯಕ್ತಿಯು ತನ್ನ ಬ್ಯಾಂಕ್ ಖಾತೆ ವಿವರಗಳನ್ನು ನೀಡಿ, ಅಂಚೆ ಮೂಲಕ ನೋಟುಗಳನ್ನು ಕಳುಹಿಸಿ, ಅದನ್ನು RBI ಖಾತೆಯಲ್ಲಿ ಠೇವಣಿಯನ್ನು ಮಾಡಬಹುದು.ಇನ್ನೂ ಸ್ಥಳೀಯ ಬ್ಯಾಂಕ್‌ಗಳಲ್ಲಿ 2,000 ನೋಟುಗಳನ್ನು ಠೇವಣಿ ಮಾಡಲು ಅವಕಾಶವಿಲ್ಲ.ಅಂದರೆ ಇದು ಈಗ ರಿಸರ್ವ್ ಬ್ಯಾಂಕ್ ಮಟ್ಟದ ಪ್ರಕ್ರಿಯೆ ಇದೆ. ಸಾಮಾನ್ಯ ಬ್ಯಾಂಕುಗಳಲ್ಲಿ ನೇರ ಸೇವೆ ಇರುವುದಿಲ್ಲ.ಕಪ್ಪುಹಣವನ್ನು ಪಡೆಯುವ ನಿಟ್ಟಿನಲ್ಲಿ RBI ತೆಗೆದುಕೊಂಡ ಮಹತ್ವದ ನಿರ್ಧಾರಗಳಲ್ಲಿ ಒಂದಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 2,000 ಮುಖಬೆಲೆಯ ನೋಟುಗಳನ್ನು ಸ್ಥಳೀಯ ಬ್ಯಾಂಕ್‌ಗಳಲ್ಲಿ ಸ್ವೀಕರ ಮಾಡುವುದಿಲ್ಲ.ಜನರು ಈ ನೋಟುಗಳನ್ನು ಆರ್‌ಬಿಐನ ಆಯ್ದ ಕಚೇರಿಗಳಲ್ಲಿ ಮಾತ್ರ ತಮ್ಮ ಖಾತೆಗಳಿಗೆ ಠೇವಣಿ ಮಾಡಿಸಬಹುದು.
ತಮ್ಮ ಹತ್ತಿರದ ಅಂಚೆ ಕಚೇರಿಗಳ (ಇಂಡಿಯಾ ಪೋಸ್ಟ್) ಮೂಲಕ ಆರ್‌ಬಿಐಗೆ ನೋಟುಗಳನ್ನು ಕಳುಹಿಸಿ, ಬ್ಯಾಂಕ್ ಖಾತೆಗೆ ಠೇವಣಿ ಮಾಡಿಸಬಹುದಾಗಿದೆ. ಇದಕ್ಕೆ ವಿತರಣೆ ಹಾಗೂ ಪ್ಯಾಕೇಜಿಂಗ್ ನಿಯಮಗಳು ಕೂಡ ಇರುತ್ತದೆ.
ಚೆನ್ನೈ, ಮುಂಬೈ, ಕೋಲ್ಕತಾ, ನವದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಇರುವ ಆರ್‌ಬಿಐ ಕಚೇರಿಗಳ ಮೂಲಕ ಮಾತ್ರ ಈ ಸೇವೆ ಸದ್ಯ ಚಾಲ್ತಿಯಲ್ಲಿ ಇದೆ.
