Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

200 ವರ್ಷ ಹಳೆಯ ಫಿರೋಜಪುರ ಕೋಟೆ ಈಗ ಸಾರ್ವಜನಿಕ ವೀಕ್ಷಣೆಗೆ ತೆರೆಯಲಾಗಿದೆ

Spread the love

ಫಿರೋಜಪುರ: ಪಂಜಾಬ್‌ನಲ್ಲಿರುವ 200 ವರ್ಷ ಹಳೆಯ ಫಿರೋಜಪುರ ಕೋಟೆಯನ್ನು ಇದೇ ಮೊದಲ ಬಾರಿಗೆ ಜನರಿಗೆ ಮುಕ್ತಗೊಳಿಸಲಾಗಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸಲು, ಐತಿಹಾಸಿಕ ಹಾಗೂ ಮಹತ್ವದ ವಾಸ್ತುಶಿಲ್ಪ ತಾಣವಾಗಿರುವ ಈ ಕೋಟೆಯನ್ನು ವೀಕ್ಷಣೆಗೆ ಮುಕ್ತಗೊಳಿಸಿರುವುದಾಗಿ ಸೇನೆಯ ಗೋಲ್ಡನ್‌ ಆಯರೋ (ಜಿಒಸಿ) ವಿಭಾಗ ತಿಳಿಸಿದೆ.

ರಾಷ್ಟ್ರದ ಪಾರಂಪರಿಕ ತಾಣಗಳನ್ನು ರಕ್ಷಿಸುವ ಹಾಗೂ ಗಡಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಒಸಿಯ ಅಧಿಕಾರಿ ಮೇಜರ್‌ ಜನರಲ್ ಆರ್‌ ಎಸ್ ಮನ್ರಾಲ್‌ ಹೇಳಿದರು.

ಭಾರತ- ಪಾಕಿಸ್ತಾನ ಗಡಿಯಲ್ಲಿರುವ ಈ ಕೋಟೆಯು 19 ನೇ ಶತಮಾನದಲ್ಲಿ ಸಿಖ್‌ ಸಾಮ್ರಾಜ್ಯದ ಕೊಡುಗೆಯಾಗಿದೆ. ರಕ್ಷಣಾತ್ಮಕ ತಂತ್ರಗಳನ್ನೊಳಗೊಂಡ ಇದರ ವಿನ್ಯಾಸ ಹಾಗೂ ನಿರ್ಮಾಣವು ಅಂದಿನ ಕಾಲದ ಸೇನೆಯ ಜಾಣ್ಮೆಗೆ ಉದಾಹರಣೆಯಾಗಿದೆ.


Spread the love
Share:

administrator

Leave a Reply

Your email address will not be published. Required fields are marked *