ಪರೀಕ್ಷೆ ತಯಾರಿಯಲ್ಲಿದ್ದಾಗ ಹಾಸ್ಟೆಲ್‌ನಲ್ಲಿ 4.5 ಕೆಜಿ ಮಗುವಿಗೆ ಜನ್ಮ ನೀಡಿದ 20ರ ವಿದ್ಯಾರ್ಥಿನಿ!

ಚೀನಾ : ಆ ದೇಶ ಅಂದ್ರೇನೇ ವಿಚಿತ್ರ.ಅಲ್ಲಿನ ಸುದ್ದಿಗಳು ಸಾಮಾನ್ಯವಾಗಿ ಹೊರಬರೋದೇ ಇಲ್ಲ.ಇದೀಗ ಅಚ್ಚರಿ ಹುಟ್ಟಿಸುವಂತಹ ಘಟನೆಯೊಂದು ವೈರಲ್ ಆಗಿದೆ.ಚೀನಾದ ಹುಬೈ ಪ್ರಾಂತ್ಯದ ವಿಶ್ವವಿದ್ಯಾಲಯದ ಹಾಸ್ಟೆಲ್ನಲ್ಲಿ 20 ವರ್ಷದ ಯುವತಿಯೊಬ್ಬಳು ಪರೀಕ್ಷೆ ತಯಾರಿ ನಡೆಸುತ್ತಿದ್ದಾಗ 4.5 ಕೆಜಿ ತೂಕದ ಮಗುವಿಗೆ ಜನ್ಮ ನೀಡಿದ್ದಾಳೆ

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಈ ಬಗ್ಗೆ ವರದಿ ಮಾಡಿದ್ದು, ವಿದ್ಯಾರ್ಥಿನಿಗೆ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡಿದೆ. ವೈದ್ಯರ ಬಳಿ ಹೋಗುವ ಮೊದಲೇ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಹೇಳಲಾಗಿದೆ.ಮಧ್ಯರಾತ್ರಿಯಲ್ಲಿ 20 ವರ್ಷದ ವಿದ್ಯಾರ್ಥಿನಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು,ಆಕೆಯ ರೂಮ್‌ಮೇಟ್ಗೆ ರಕ್ತ ವಾಸನೆ ಬಂದಿದೆ.ಎದ್ದು ನೋಡುವಾಗ ಆಕೆ ನೋವಿನಿಂದ ಬಳಲುತ್ತಿದ್ದಳು. ಹೊದಿಕೆ ಸಂಪೂರ್ಣ ರಕ್ತದಿಂದ ತುಂಬಿ ಹೋಗಿತ್ತು. ತಕ್ಷಣ ಸಹಾಯಕ್ಕೆ ಅಕ್ಕಪಕ್ಕ ರೂಮ್ನ ಸ್ನೇಹಿತರ ಬಳಿ ಸಹಾಯ ಕೇಳಲು ಹೋಗುವಷ್ಟರಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ.
ವಿದ್ಯಾರ್ಥಿನಿಗೆ ಹೆರಿಗೆ ಆಗಿದ್ದು ದೊಡ್ಡ ವಿಷಯವೇನಲ್ಲ. ಯಾಕೆಂದರೆ ಆಕೆಗೆ ಈಗಾಗಲೇ ಒಂದು ಮಗು ಇತ್ತು. ಆದ್ದರಿಂದ ತುಂಬಾ ಶಾಂತವಾಗಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾಳೆ ಎಂದು ಸ್ನೇಹಿತರು ಹೇಳಿದ್ದಾಳೆ.ಗರ್ಭಿಣಿ ಮಹಿಳೆಯನ್ನು ಸರಿಯಾದ ಆರೈಕೆಯಿಲ್ಲದೆ ವಸತಿ ನಿಲಯದಲ್ಲಿ ಬಿಟ್ಟಿದ್ದಕ್ಕಾಗಿ ವಿದ್ಯಾರ್ಥಿನಿಯ ಕುಟುಂಬವನ್ನು ವೈದ್ಯರು ತರಾಟೆಗೆ ತೆಗೆದುಕೊಂಡಿದ್ದಾರೆ.ವಿದ್ಯಾರ್ಥಿನಿಯನ್ನು ಪರೀಕ್ಷೆ ಮಾಡಿದ ವೈದ್ಯರು ಮಗುವಿನ ಗಾತ್ರವನ್ನು ನೋಡಿ ಕೂಡ ಅಚ್ಚರಿಗೊಂಡಿದ್ದಾರೆ. ಗರ್ಭಾವಸ್ಥೆಯಲ್ಲಿ ವ್ಯಾಯಾಮದ ಕೊರತೆ ಇತ್ತಂತೆ.ಇನ್ನೊಂದೆಡೆ ಹೆಚ್ಚಿನ ಒತ್ತಡದಿಂದ ತಾಯಿ ತೀವ್ರ ನೋವು ಅನುಭವಿಸಿದ್ದಾಳೆ ಎಂದು ಹೇಳಲಾಗಿದೆ.
‘ಪರೀಕ್ಷೆ ಬರೆದು ಆಸ್ಪತ್ರೆ ಹೋಗಬೇಕು ಎಂದು ನಿರ್ಧರಿಸಿದ್ದೆ.ಆದರೆ ನನ್ನ ಮಗು ಇಷ್ಟು ಬೇಗ ಹೊರಬರುತ್ತದೆ ಎಂಬುದನ್ನು ನನಗೆ ಗೊತ್ತಿರಲಿಲ್ಲ’ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ.
‘ಪರೀಕ್ಷೆಗೂ ಮೊದಲ ದಿನ ನನಗೆ ಹೊಟ್ಟೆ ನೋವು ಪ್ರಾರಂಭವಾಗಿತ್ತು,ಆದರೆ ಅದು ಸಾಮಾನ್ಯ ಎಂದುಕೊಂಡು ನಿದ್ರೆ ಮಾಡಲು ಹೋದೆ.ನೋವು ಹೆಚ್ಚಾದರೆ ಬೆಳಿಗ್ಗೆ ಆಸ್ಪತ್ರೆಗೆ ಹೋಗಬಹುದು ಎಂದುಕೊಂಡೆ.ಆದರೆ ನೋವು ತಡೆಯಲು ಆಗಲಿಲ್ಲ’ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ.
