ಮಾಯನ್ ನಾಗರಿಕತೆಯ ಮೊದಲ ಸಾಮ್ರಾಟ ‘ಟೆ ಕಾಬ್ ಚಾಕ್’ನ 1,600 ವರ್ಷಗಳ ಹಿಂದಿನ ಸಮಾಧಿ ಪತ್ತೆ!

ಹೊಸದಿಲ್ಲಿ: ವಿಶ್ವದ ಪ್ರಾಚೀನ ನಾಗರಿಕತೆಗಳಲ್ಲಿ ಒಂದು ಎನಿಸಿಕೊಂಡಿರುವ ಮಾಯನ್ ನಾಗರಿಕತೆಯ ಮೊದಲ ಸಾಮಾಟ್ರ “ಟೆ ಕಾಬ್ ಚಾಕ್’ನ ಸಮಾಧಿಯನ್ನು ಪುರಾತತ್ವ ತಜ್ಞರು ಪತ್ತೆ ಮಾಡಿದ್ದು, ಇದು 1,600 ವರ್ಷಗಳ ಹಿಂದಿನದ್ದು ಎಂದು ಹೇಳಲಾಗುತ್ತಿದೆ.

ಮಾಯನ್ ನಾಗರಿಕತೆಯಲ್ಲಿನ ಪ್ರಮುಖ ನಗರವಾಗಿದ್ದ ಕ್ಯಾರಕೋಲ್‌ನ ಹಲವು ಕುರುಹುಗಳು ಇಂದಿನ ಮಧ್ಯ ಅಮೆರಿಕದ ದೇಶ ಬೆಲೀಜ್‌ನಲ್ಲಿ ದೊರೆತಿದೆ.
ಅದರಂತೆ ಈ ಪ್ರದೇಶವನ್ನು ಸ್ಮಾರಕವನ್ನಾಗಿಸಿರುವ ಅಲ್ಲಿನ ಆಡಳಿತ ಅಲ್ಲಿ ಹಲವು ಸಂಶೋಧನೆಗಳನ್ನು ನಡೆಸುತ್ತಿದೆ.
ಆ ಸಂಶೋಧನೆಗಳ ಪೈಕಿ ಇದೀಗ ಟೆ ಕಾಬ್ ಚಾಕ್ ಸಮಾಧಿ ದೊರೆತಿದೆ. ಇದೇ ಮೊದಲ ಬಾರಿಗೆ ರಾಜಮನೆತನಕ್ಕೆ ಸೇರಿದ, ಗುರುತಿಸಬಲ್ಲಂತಹ ಮೊದಲ ಸಮಾಧಿ ಇದಾಗಿದೆ.
ಹ್ಯೂಸ್ಟನ್ ವಿಶ್ವವಿದ್ಯಾನಿಲಯದ ಪುರಾತತ್ವ ತಜ್ಞರು ಕಳೆದ 40 ವರ್ಷಗಳಿಂದ ಈ ಪ್ರದೇಶದಲ್ಲಿ ಉತVನನ ನಡೆಸುತ್ತಿದ್ದಾರೆ.
ಈ ಸಮಾಧಿಯಲ್ಲಿ ಹಲವು ಮಣ್ಣಿನ ಪಾತ್ರೆಗಳು, ಮೂಳೆಗಳು, ಕಪ್ಪೆಚಿಪ್ಪುಗಳು, ಪಚ್ಚೆಯ ಮಣಿಗಳು ಹಾಗೂ ಪಚ್ಚೆ ಕಲ್ಲಿನಿಂದಲೇ ಮಾಡಿದ ಮರಣ ಮುಖ ವಾಡ (ಡೆತ್ ಮಾಸ್ಕ್) ದೊರೆತಿದ್ದು, ಕುತೂಹಲಕ್ಕೆ ಕಾರಣವಾಗಿದೆ.
