Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

₹16 ಕೋಟಿ ಜಿಎಸ್‌ಟಿ ವಂಚನೆ: ಬೆಳಗಾವಿಯಲ್ಲಿ ಪ್ರಮುಖ ಆರೋಪಿ ಬಂಧನ

Spread the love

ಬೆಳಗಾವಿ: ಬಳ್ಳಾರಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ₹16 ಕೋಟಿ ಜಿಎಸ್‌ಟಿ ವಂಚಿಸಿದ ಆರೋಪಿಯನ್ನು ಕೇಂದ್ರ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.

ಯಾವುದೇ ಅಧಿಕೃತ ವ್ಯವಹಾರ ಮಾಡದೇ ಕೋಟ್ಯಂತರ ರೂಪಾಯಿ ವ್ಯವಹಾರದ ಇನ್‌ವಾಯ್ಸ್‌ಗಳನ್ನು ಸೃಷ್ಟಿ ಮಾಡಿದ್ದು ಅಧಿಕಾರಿಗಳ ಗಮನಕ್ಕೆ ಬಂದಿತ್ತು.

ಕಂಪನಿಗಳು ಇವೆ ಎಂದು ನಮೂದಾಗಿದ್ದ ಬಳ್ಳಾರಿಯ ಮೂರು ಸ್ಥಳಗಳಿಗೆ ಅಧಿಕಾರಿಗಳು ಭೇಟಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿತು.

ಈ ಆರೋಪಿ ವಿವಿಧ ಹೆಸರುಗಳಲ್ಲಿ ನಕಲಿ ಕಂಪನಿಗಳ ದಾಖಲೆ ಸೃಷ್ಟಿಸಿ, ವ್ಯವಹಾರ ನಡೆಸಿದ ಹಾಗೆ ಇನ್‌ವಾಯ್ಸ್‌ಗಳನ್ನು ಸಿದ್ಧಪಡಿಸಿ, ನಕಲಿ ಒಪ್ಪಂದ, ನಕಲಿ ಬಿಲ್‌ಗಳನ್ನು ಸೃಷ್ಟಿಸಿದ್ದಾನೆ. ಇದಕ್ಕಾಗಿ ತನ್ನ ಕಚೇರಿಯ ನೌಕರರ ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌ಗಳನ್ನು ಬಳಸಿಕೊಂಡಿದ್ದಾನೆ.

ಒಟ್ಟು ₹16 ಕೋಟಿ ಮೌಲ್ಯದ ಇನ್‌ಪುಟ್‌ ಟ್ಯಾಕ್ಟ್‌ ಕ್ರೆಡಿಟ್‌ ಪಡೆದಿದ್ದಾನೆ. ಸದ್ಯ ಬಂಧಿಸಲಾದ ಆರೋಪಿ ಈ ಪ್ರಕರಣದ ‘ಪ್ರಮುಖ ಸೂತ್ರಧಾರ’ ಆಗಿದ್ದು, ಇನ್ನುಳಿದ ಆರೋಪಿಗಳನ್ನೂ ಬಂಧಿಸಲಾಗುವುದು. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಜಿಎಸ್‌ಟಿ ಕಚೇರಿಯ ಪ್ರಕಟಣೆ ತಿಳಿಸಿದೆ.


Spread the love
Share:

administrator

Leave a Reply

Your email address will not be published. Required fields are marked *