Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

‘0001’ ಗಾಗಿ 14 ಲಕ್ಷ ರೂ.: ಹಿಮಾಚಲದಲ್ಲಿ ಸ್ಕೂಟರ್‌ಗಿಂತಲೂ ನಂಬರ್ ಪ್ಲೇಟ್‌ಗೆ ಭಾರಿ ಬೆಲೆ!

Spread the love

OMG : 1 ಲಕ್ಷ ರೂಪಾಯಿ ಬೆಲೆಯ 'ಸ್ಕೂಟರ್'ಗೆ ₹14 ಲಕ್ಷ ವ್ಯಯಿಸಿ 'ನಂಬರ್ ಪ್ಲೇಟ್' ಖರೀದಿಸಿದ ವ್ಯಕ್ತಿ

ನವದೆಹಲಿ : ಹಿಮಾಚಲ ಪ್ರದೇಶದಲ್ಲಿ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದ್ದು, ಒಬ್ಬ ವ್ಯಕ್ತಿ ತನ್ನ ಸ್ಕೂಟರ್’ಗೆ ವಿಐಪಿ ನಂಬರ್ ಪ್ಲೇಟ್ ಹಾಕಿಸಲು 14 ಲಕ್ಷ ರೂ. ಖರ್ಚು ಮಾಡಿದ್ದಾನೆ. ಕುತೂಹಲಕಾರಿ ವಿಷಯವೆಂದರೆ ಸ್ಕೂಟರ್‌’ನ ಬೆಲೆ ಕೇವಲ 1 ಲಕ್ಷ ರೂ.

ವಿಐಪಿ ಫ್ಯಾನ್ಸಿ ಸಂಖ್ಯೆಗಳ ಮೇಲಿನ ಪ್ರೀತಿಯ ಈ ವಿಶಿಷ್ಟ ಪ್ರಕರಣವು ಈ ಪ್ರದೇಶದಲ್ಲಿ ಚರ್ಚೆಯ ವಿಷಯವಾಗಿದೆ.

ವರದಿಯ ಪ್ರಕಾರ, ಹಿಮಾಚಲ ಪ್ರದೇಶದ ಹಮೀರ್‌ಪುರದ ನಿವಾಸಿ ಸಂಜೀವ್ ಕುಮಾರ್ ಇತ್ತೀಚೆಗೆ ಹೊಸ ಸ್ಕೂಟರ್ ಖರೀದಿಸಿದರು. ಅವರು ತಮ್ಮ ಸ್ಕೂಟರ್‌’ಗೆ ವಿಐಪಿ ಸಂಖ್ಯೆಯನ್ನು ಬಯಸಿದ್ದರು. ನಂತರ ಹಿಮಾಚಲ ಪ್ರದೇಶ ಸಾರಿಗೆ ಇಲಾಖೆ ಆಯೋಜಿಸಿದ್ದ ಆನ್‌ಲೈನ್ ಹರಾಜಿನಲ್ಲಿ 14 ಲಕ್ಷ ರೂ.ಗಳ ಅತ್ಯಧಿಕ ಮೊತ್ತಕ್ಕೆ ಬಿಡ್ ಮಾಡುವ ಮೂಲಕ ನಂಬರ್ ಪ್ಲೇಟ್ (HP21C-0001) ಖರೀದಿಸಿದರು.

ಈ ಆನ್‌ಲೈನ್ ಹರಾಜಿನಲ್ಲಿ ಕೇವಲ ಇಬ್ಬರು ಮಾತ್ರ ಭಾಗವಹಿಸಿದ್ದರು ಎಂದು ಹೇಳಲಾಗುತ್ತಿದೆ. ಇದರಲ್ಲಿ ಸೋಲನ್ ಜಿಲ್ಲೆಯ ವ್ಯಕ್ತಿಯೊಬ್ಬರು ಈ ಸಂಖ್ಯೆಗೆ 13.5 ಲಕ್ಷ ರೂ.ವರೆಗೆ ಬಿಡ್ ಮಾಡಿದ್ದರು. ಆದರೆ ಸಂಜೀವ್ ಕುಮಾರ್ ಈ ಸಂಖ್ಯೆಗೆ 14 ಲಕ್ಷ ರೂ. ಬಿಡ್ ಮಾಡುವ ಮೂಲಕ ಅದನ್ನ ಪಡೆದರು.

ವಿಐಪಿ ನಂಬರ್ ಪ್ಲೇಟ್ ಹರಾಜಿನ ಸಂಪೂರ್ಣ ಮೊತ್ತವನ್ನ ರಾಜ್ಯ ಸರ್ಕಾರದ ಖಜಾನೆಯಲ್ಲಿ ಠೇವಣಿ ಇಡಲಾಗಿದ್ದು, ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಆದಾಯ ಗಳಿಸುತ್ತಿದೆ. ಸಾರಿಗೆ ಅಧಿಕಾರಿಗಳ ಪ್ರಕಾರ, ಇದು ರಾಜ್ಯದಲ್ಲಿ ದ್ವಿಚಕ್ರ ವಾಹನಕ್ಕೆ ನೀಡಲಾದ ಅತ್ಯಂತ ದುಬಾರಿ ನೋಂದಣಿ ಸಂಖ್ಯೆಯಾಗಿರಬಹುದು.

ವಿಶೇಷ ಮತ್ತು ವಿಶಿಷ್ಟ ಸಂಖ್ಯೆಗಳನ್ನ ಸಂಗ್ರಹಿಸುವ ಹವ್ಯಾಸವನ್ನ ಸಂಜೀವ್ ಕುಮಾರ್ ಹೊಂದಿದ್ದು, ತಮ್ಮ ಹೊಸ ಸ್ಕೂಟರ್‌’ಗೂ ಇದೇ ರೀತಿಯ ವಿಐಪಿ ಸಂಖ್ಯೆಯನ್ನ ಬಯಸಿರುವುದಾಗಿ ಹೇಳಿದರು. “ಪ್ಯಾಶನ್‌’ಗೆ ಯಾವುದೇ ಬೆಲೆ ಇಲ್ಲ, ಅಸಾಧಾರಣವಾದದ್ದನ್ನು ಬಯಸಿದಾಗ, ಬೆಲೆಯನ್ನು ನೋಡುವುದಿಲ್ಲ” ಎಂದು ಅವರು ಹೇಳಿದರು.

ಸಂಜೀವ್ ಅವರ ಮಗ ದಿನೇಶ್ ಕುಮಾರ್, “ನಾವು ಈ ಸಂಖ್ಯೆಗೆ ಆನ್‌ಲೈನ್‌’ನಲ್ಲಿ ಅರ್ಜಿ ಸಲ್ಲಿಸಿದ್ದೆವು. ಮತ್ತೊಬ್ಬ ವ್ಯಕ್ತಿ ಕೂಡ ಸ್ಪರ್ಧೆಯಲ್ಲಿದ್ದರು, ಆದರೆ ನಾವು ಅತಿ ಹೆಚ್ಚು ಬಿಡ್ ಮಾಡುವ ಮೂಲಕ ಈ ಸಂಖ್ಯೆಯನ್ನು ಪಡೆದುಕೊಂಡಿದ್ದೇವೆ” ಎಂದು ಹೇಳಿದರು.


Spread the love
Share:

administrator

Leave a Reply

Your email address will not be published. Required fields are marked *