124 ದಿನಗಳ ಸಲ್ಲೇಖನ ವ್ರತ: ರಬಕವಿ-ಬನಹಟ್ಟಿ ಭದ್ರಗಿರಿ ಬೆಟ್ಟದಲ್ಲಿ 103 ವರ್ಷದ ಜೈನ ಆರಿಕಾ ದರ್ಶನಭೂಷಣ ಮತಿ ಮಾತಾಜಿ ಸಮಾದಿ ಮರಣ

ರಬಕವಿ-ಬನಹಟ್ಟಿ: ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಕಳೆದ 124 ದಿನಗಳ ಹಿಂದೆ ಸಲ್ಲೇಖನ ವೃತ ಸ್ವೀಕರಿಸಿದ್ದ ಜೈನ ಆರಿಕಾ ದರ್ಶನ ಭೂಷಣ ಮತಿ ಮಾತಾಜಿ ಅವರು ಆಚಾರ್ಯ ಶ್ರೀ 108 ಕುಲರತ್ನಭೂಷಣ ಮಹಾರಾಜರಿಂದ ಉಪದೇಶ ಸ್ವಿಕರಿಸುತ್ತಾ ಅ.20ರ ಸೊಮವಾರ ಸಮಾದಿ ಮರಣ ಹೊಂದಿದರು

ಅ.18 ರಂದು ಬೆಳಿಗ್ಗೆ ಅವರ ಉಸಿರಾಟದಲ್ಲಿ ತುಂಬಾ ಬದಲಾವಣೆ ಕಂಡ ನಿಮಿತ್ತ ಅವರು ಸ್ವಯಂ ಪ್ರೇರಿತವಾಗಿ ಆಚಾರ್ಯಶ್ರೀ ಕುಲರತ್ನಭೂಷಣ ಮಹಾರಾಜರಿಂದ ಅ.19 ರಂದೇ ಯಮಸಲ್ಲೇಖನ ವೃತ ಸ್ವೀಕರಿಸಿದ್ದರು. ಜೀವಿತಾವಧಿಯ ಕೊನೆ ಕ್ಷಣಗಳತ್ತ ಅವರ ಪಯಣ ಸಾಗಿತ್ತು. ಪ್ರತ್ಯಕ್ಷವಾಗಿ ಆತ್ಮ ದೇಹವನ್ನು ಬಿಟ್ಟು ಹೋಗುವಾಗ ಈ ಕಾಯ ಹೇಗಿರುತ್ತದೆ ಎಂಬುದನ್ನು ವೀಕ್ಷಿಸಲು ಸಾವಿರಾರು ಜೈನ ಧರ್ಮಿಯರು ಹಾಗೂ ಅನ್ಯಧರ್ಮಿಯರೂ ಆಗಮಿಸಿ ಅಲ್ಲಿ ನೆರೆದಿದ್ದರು.
ಸಾವಿರಾರು ಜನರ ಎದುರೇ ದರ್ಶನಭೂಷಣ ಮತಿ ಮಾತಾಜಿ ಅ.20ರ ಸೂರ್ಯಾಸ್ಥ ಸಮಯ ಮುಗಿಯುತ್ತಿದ್ದಂತೆ ಸಂಜೆ 6.48ಕ್ಕೆ ಉಸಿರಾಟ ನಿಂತು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದರು. ಆ ಕ್ಷಣ ಸಾವಿರಾರು ಭಕ್ತರ ಕಣ್ಣಂಚಿನ ಕಂಬಿನಿಯ ಕಟ್ಟೆ ಒಡೆದಿತ್ತು. ಆಚಾರ್ಯ ಶ್ರೀಗಳಿಂದ ಸಲ್ಲೇಖನ ವೃತ ಸ್ವಿಕರಿಸಿ 124 ದಿನಗಳು ಕಳೆದಿದ್ದವು. ಈ ದೇಹದಲ್ಲಿನ ಮಾಂಸ ಕಂಡ ಸಂಪೂರ್ಣ ಪಂಚಭೂತಗಳಲ್ಲಿ ಲೀನವಾಗಲು ಅನ್ನತ್ಯಾಗ ಮಾಡಿ ಈ ಭೂಮಂಡಲ ಬಿಟ್ಟು ಹೋಗಲು 124 ದಿನಗಳ ಬೇಕಾಯಿತು. ಅವರಿಗೆ 103 ವರ್ಷವಾಗಿತ್ತು.
ಅ.21 ರ ಮಂಗಳವಾರ ಬೆಳಿಗ್ಗೆ 9ಕ್ಕೆ ಭದ್ರಗಿರಿ ಬೆಟ್ಟದಲ್ಲಿ ಅವರಿಗೆ ಜೈನ ಧರ್ಮದ ವಿಧಿವಿಧಾನದಂತೆ ಅಂತಿಮ ಸಂಸ್ಕಾರ ಮಾಡಲಾಯಿತು. ಅವರ ಅಂತಿಮ ಯಾತ್ರೆಯಲ್ಲಿ ಸಾವಿರಾರು ಶ್ರಾವಕ ಶ್ರಾವಕಿಯರು ಹಾಜರಿದ್ದು, ಅವರ ಆತ್ಮಕ್ಕೆ ಆ ಮಹಾವೀರ ಭಗವಾನರು ಶಾಂತಿ ನೀಡಲಿ ಎಂದು ಪ್ರಾರ್ಥಸಿದರು. ಈ ಸಂದರ್ಭದಲ್ಲಿ ಅನೇಕ ರಾಜಕೀಯ ಮುಖಂಡರು, ಅನ್ಯಧರ್ಮಿಯ ಮುಖಂಡರು ಭಾಗವಹಿಸಿದ್ದರು