ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ 1 ದಿನದ ಹಸುಗೂಸು ಕಳ್ಳತನ: ನರ್ಸ್ ವೇಷದಲ್ಲಿ ಮಹಿಳೆ ಎಸ್ಕೇಪ್

ಬಾಗಲಕೋಟೆ : ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ 1 ದಿನದ ಹೆಣ್ಣು ಮಗುವಿನ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ.
ನರ್ಸ್ ಅಂತೇಳಿ ಹೆಣ್ಣು ಮಗುವನ್ನು ಕಳ್ಳಿ ಕದ್ದೊಯ್ದಿರುವ ಘಟನೆ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಮಾಬೂಬಿ (30) ಎಂಬುವರ ಮಗುವನ್ನು ಕಳ್ಳಿ ಕದ್ದೊಯ್ದಿದ್ದಾಳೆ.
ಕಫಾ ತೆಗೆಸುವುದಾಗಿ ಹೇಳಿ ಮಗು ಕದ್ದೊಯ್ದಿದ್ದಾಳೆ. ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.