ಸುದ್ದಿಗಳುಇನ್ಸ್ಟಾಗ್ರಾಮ್‌ನಲ್ಲಿ ‘RIP’ ಫೋಟೋ ಪೋಸ್ಟ್ ಮಾಡಿ ಆತ್ಮಹತ್ಯೆಗೆ ಶರಣಾದ ಯುವಕ.
ಸಾವಿನ ಮೊದಲೇ ತನ್ನ ಫೋಟೋಗೆ ‘RIP’ಎಂದು ಬರೆದು ಯುವಕನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯ ಆಲುವಾದಲ್ಲಿ ನಡೆದಿದೆ.

ಅಜ್ಮಲ್ ಶೆರೀಫ್ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ 14 ಸಾವಿರಕ್ಕೂ ಹೆಚ್ಚಿನ ಫಾಲೋವರ್ಸ್ ಗಳಿದ್ದಾರೆ. ಫೋಟೋಗ್ರಾಫಿ, ಕಾರು ಹಾಗೂ ಬೈಕ್ ಸಂಬಂಧಿತ ಫೋಸ್ಟ್ ಗಳನ್ನು ಈ ಪೇಜ್ ನಲ್ಲಿ ಅಜ್ಮಲ್ ಹಾಕುತ್ತಿದ್ದರು.
ಶುಕ್ರವಾರ ಡಿ.8 ರಂದು ಸಂಜೆ ಅಜ್ಮಲ್ ತನ್ನ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಫೋಟೋ ಹಾಕಿ ಅದರ ಕೆಳಗೆ ʼRIP’ಎಂದು ಬರೆದು ʼ1995-2023ʼ ಅಜ್ಮಲ್ ಶೆರೀಫ್ ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದುಕೊಂಡಿದ್ದಾರೆ
