Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸಂಚಲನ ಮೂಡಿಸಿದ ಹೊಸ ಕಾಯಿಲೆ: ಗುಯಿಲಿನ್ ಬ್ಯಾರೆ ಸಿಂಡ್ರೋಮ್.!! 4 ದಿನಲ್ಲಿ 3 ಜೀವ ಬಲಿ

Spread the love

ಗುಯಿಲಿನ್ ಬ್ಯಾರೆ ಸಿಂಡ್ರೋಮ್ ದೇಶದಲ್ಲಿ ಸಂಚಲನ ಮೂಡಿಸುತ್ತಿದೆ. ದೇಶಾದ್ಯಂತ ಜಿಬಿಎಸ್ ಪ್ರಕರಣಗಳು ಹೆಚ್ಚುತ್ತಿದ್ದು ಆತಂಕ ಹುಟ್ಟಿಸಿದೆ. ಇದೀಗ ತೆಲಂಗಾಣದಲ್ಲಿ ಮೊದಲ ಜಿಬಿಎಸ್‌ನ ಪ್ರಕರಣ ದಾಖಲಾಗಿದೆ.ಹೈದರಾಬಾದ್‌ನಲ್ಲಿ ಗುಯಿಲಿನ್ ಬ್ಯಾರೆ ಸಿಂಡ್ರೋಮ್ ಕೇಸ್ ಪತ್ತೆ ಹಚ್ಚಲಾಗಿದೆ. ಸಿದ್ದಿಪೇಟೆಯ ಮಹಿಳೆಯೊಬ್ಬರು ಜಿಬಿಎಸ್ ಲಕ್ಷಣಗಳನ್ನು ಹೊಂದಿದ್ದಾರೆ. ಹೈದರಾಬಾದ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 4 ದಿನಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಜಿಬಿಎಸ್‌ನಿಂದ ಮಗು ಸೇರಿ ಮೂವರು ಜೀವ ಕಳೆದುಕೊಂಡಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಸುಮಾರು 130 GBS ಶಂಕಿತ ಪ್ರಕರಣಗಳು ದಾಖಲಾಗಿವೆ.

ಮೊದಲ GBS ಪ್ರಕರಣ ದಾಖಲಾದ ಬೆನ್ನಲ್ಲೇ ತೆಲಂಗಾಣ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕಿನಿಂದ ಇದು ಬರುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಜನರಿಗೆ ಜಿಬಿಎಸ್ ಸೋಂಕು ತಗಲುತ್ತದೆ. ಈ ವೈರಸ್‌ ನರಗಳ ಮೇಲೆ ಪರಿಣಾಮ ಬೀರುತ್ತದೆ.

ಲಕ್ಷಣಗಳು:

. ಸೋಂಕಿಗೆ ಒಳಗಾದ ವ್ಯಕ್ತಿ ದೇಹ ಮರಗಟ್ಟುತ್ತದೆ
. ಸ್ನಾಯು ದೌರ್ಬಲ್ಯ, ಅತಿಸಾರ, ಹೊಟ್ಟೆ ನೋವು
. ಜ್ವರ ಮತ್ತು ವಾಂತಿಯಂತಹ ಲಕ್ಷಣಗಳು ಕಾಣುತ್ತದೆ
. ಸ್ನಾಯು ದೌರ್ಬಲ್ಯ ಅಥವಾ ಪಾರ್ಶ್ವವಾಯು ಸಂಭವ ಇದೆ

ಕಲುಷಿತ ಆಹಾರ ಮತ್ತು ನೀರಿನ ಮೂಲಕ ಬ್ಯಾಕ್ಟೀರಿಯಾ ಹರಡುತ್ತದೆ. ಜಿಬಿಎಸ್ ಸಾಂಕ್ರಾಮಿಕ ರೋಗವಲ್ಲ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಗುಣಪಡಿಸಬಹುದು. ಈ ವೈರಸ್‌ನಿಂದ ಯಾರೂ ಭಯಭೀತರಾಗೋದು ಬೇಡ. ಗುಯಿಲಿನ್-ಬಾರ್ ಸಿಂಡ್ರೋಮ್ ದೇಹದ ರೋಗ ನಿರೋಧಕ ವ್ಯವಸ್ಥೆ ಮೇಲೆ ಪೆಟ್ಟು ನೀಡುತ್ತದೆ. ನರಗಳ ಮೇಲೆ ಒತ್ತಡ ಹೇರುತ್ತದೆ.


Spread the love
Share:

administrator

Leave a Reply

Your email address will not be published. Required fields are marked *