ಶಿಕ್ಷಣ ವಂಚಿತ ಡೆಲಿವರಿ ಬಾಯ್‌ನ ಕಣ್ಣೀರಿನ ಕಥೆ: ಚೀನಾದಲ್ಲಿ ವೈರಲ್ ಆದ ಹೃದಯವಿದ್ರಾವಕ ವಿಡಿಯೋ!

ಚೀನಾದ ಡೆಲಿವರಿ ಹುಡುಗನೊಬ್ಬ ತನ್ನ ಜೀವನದಲ್ಲಿನ ಕಷ್ಟದ ದಿನಗಳನ್ನು ನಡು ರಸ್ತೆಯಲ್ಲಿ ನೆನಪಿಸಿಕೊಂಡು ಕಣ್ಣಿರು ಸುರಿಸಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

ವಿಡಿಯೋವೊಂದರಲ್ಲಿ ‘ಜೀವನದಲ್ಲಿ ಅಕಸ್ಮಿಕವಾಗಿ ಶಿಕ್ಷಣದಿಂದ ವಂಚಿತನಾಗಿದ್ದಾನೆ.
ಹೀಗಾಗಿ, ಶಾಲೆಯಿಂದ ಬೇಗನೇ ಹೊರಗುಳಿದುದ್ದಕ್ಕೆ ವಿಷಾದ ವ್ಯಕ್ತಪಡಿಸಿ, ಅಳುವ ದೃಶ್ಯಗಳು ನೋಡುಗರ ಹೃದಯ ಕಲುಕುವಂತಿದೆ’.
ಯುವಕ ಅಪರಾಧ ಭಾವನೆಯಿಂದ ಪರಿತಪಿಸುತ್ತಿದ್ದು, ಮತ್ತೊಂದು ಅವಕಾಶ ಸಿಕ್ಕರೆ ಕಷ್ಟಪಟ್ಟು ಓದುತ್ತೇನೆ. ತನ್ನ ಶಿಕ್ಷಕರು ಶಾಲೆಯನ್ನು ಮುಂದುವರೆಸಲು ತಿಳಿಸಿದ್ದರೂ ನನ್ನ ಹಠಮಾರಿ ತನದಿಂದ ಶಾಲೆಯನ್ನು ಬೇಗನೆ ಬಿಟ್ಟಿದ್ದೇನೆ. ನಿರಂತರ ದೈಹಿಕ ಬಳಲಿಕೆ, ಭಾವನಾತ್ಮಕ ಒತ್ತಡ ಹಾಗೂ ತನ್ನ ಹೆತ್ತವರಿಗೆ ಅರ್ಹವಾದ ಜೀವನ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂಬ ಭಾವನೆಯನ್ನು ಆತ ವಿವರಿಸಿದ್ದಾನೆ.
ನಾನು ಇಂದು 10 ಗಂಟೆಗಳ ಕಾಲ ನಿರಂತರ ಕೆಲಸ ಮಾಡುತ್ತೇನೆ. ನಾಯಿಯಂತೆ ದಣಿದಿದ್ದೇನೆ.. ನಾನು ಒಂದು ನಿಮಿಷವೂ ಸುಮ್ಮನೆ ಇರಲು ಧೈರ್ಯ ಇಲ್ಲ. ಒಂದು ಹಾಗೆ ಮಾಡಿದ್ರೆ ನಾನು ಖಾಲಿ ಹೊಟ್ಟೆಯಲ್ಲಿ ಇರಬೇಕಾಗುತ್ತದೆ ಎಂದು ದುಖಿಸಿದ್ದಾನೆ.
ಇದೀಗ ಡೆಲಿವರಿ ಹುಡುಗ ಸಂಕಷ್ಟದಲ್ಲಿ ಅಳುತ್ತಾ ಮತ್ತೊಂದು ಅವಕಾಶ ಸಿಕ್ಕರೆ ಕಷ್ಟಪಟ್ಟು ಓದುವುದಾಗಿ ತಿಳಿಸಿದ್ದಾನೆ. ಹೆಚ್ಚುತ್ತಿರುವ ಹಣದುಬ್ಬರ ಮತ್ತು ಅಂತಹ ಉದ್ಯೋಗಿಗಳ ಕಳಪೆ ಬದುಕಿನ ಸ್ಥಿತಿಯ ಬಗ್ಗೆ ಈ ವಿಡಿಯೋ ತಿಳಿಸುತ್ತದೆ