ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್‌ಲಾಲ್ ಶರ್ಮಾ ಆಯ್ಕೆ.

ಬಿಜೆಪಿ ಶಾಸಕಾಂಗ ಸಭೆಯಲ್ಲಿ ರಾಜಸ್ಥಾನದ ನೂತನ ಸಿಎಂ ಹೆಸರು ಘೋಷಣೆ ಮಾಡಲಾಗಿದೆ. ರಾಜ್ಯದ ವೀಕ್ಷಕ ರಾಜನಾಥ್ ಸಿಂಗ್ ಅವರು ಭಜನ್‌ಲಾಲ್ ಶರ್ಮಾ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಘೋಷಿಸಿದ್ದಾರೆ.ಶರ್ಮಾ ಅವರು ಸಂಗನೇರ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಅವರು ನಾಲ್ಕು ಬಾರಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.ಶರ್ಮಾ 2023 ರಲ್ಲಿ ಕಾಂಗ್ರೆಸ್‌ನ ಪುಷ್ಪೇಂದ್ರ ಭಾರದ್ವಾಜ್ ಅವರನ್ನು 48,081 ಮತಗಳ ಅಂತರದಿಂದ ಸೋಲಿಸಿ ಸಂಗನೇರ್ ಸ್ಥಾನವನ್ನು ಗೆದ್ದಿದ್ದರು. ನೂತನ ಡಿಸಿಎಂ ಪ್ರೇಮ್ಚಂದ್ ಭೈರ್ವಾ ಮತ್ತು ದಿಯಾ ಕುಮಾರಿ ಅವರನ್ನು ಆಯ್ಕೆ ಮಾಡಲಾಗಿದೆ.ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ಪ್ರಕಾರ, 56 ವರ್ಷದ ಶರ್ಮಾ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಅವರ ಒಟ್ಟು ಘೋಷಿತ ಆಸ್ತಿ 1.5 ಕೋಟಿ ರೂ.ಗಳಾಗಿದ್ದು, ಇದರಲ್ಲಿ 43.6 ಲಕ್ಷ ಚರ ಆಸ್ತಿ ಮತ್ತು 1 ಕೋಟಿ ಸ್ಥಿರ ಆಸ್ತಿಗಳು ಸೇರಿವೆ. ಒಟ್ಟು ಘೋಷಿತ ಆದಾಯ 11.1 ಲಕ್ಷ ರೂ. ಇದರಲ್ಲಿ 6.9 ಲಕ್ಷ ಸ್ವಯಂ ಆದಾಯವಿದೆ.
Watch Full video here
