ರಸ್ತೆ ಅಪಘಾತದಲ್ಲಿ ಖ್ಯಾತ ಕಿರುತೆರೆ ನಟಿ ಪವಿತ್ರ ಜಯರಾಂ ದುರ್ಮರಣ.

ಕಿರುತೆರೆ ನಟಿ ಪವಿತ್ರಾ ಜಯರಾಂ(35) ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆಂಧ್ರಪ್ರದೇಶದ ಕರ್ನೂಲು ಸಮೀಪ ನಡೆದ ಕಾರು ಅಪಘಾತದಲ್ಲಿ ಅವರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಭಾನುವಾರ(ಮೇ.12 ರಂದು) ಅವರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಬಸ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ನಟಿ ಪವಿತ್ರಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮೂಲತಃ ಕನ್ನಡಿಗರಾದ ಪವಿತ್ರ ತೆಲುಗಿನ ʼತ್ರಿನಯನಿʼ ಧಾರವಾಹಿಯಲ್ಲಿ ನಟಿಸಿ ಅಪಾರ ಮನೆ ಮಂದಿಯ ಮನಗೆದ್ದಿದ್ದರು.
ಕನ್ನಡದ ‘ರೋಬೋ ಫ್ಯಾಮಿಲಿ’ ಮೂಲಕ ಕಿರುತೆರೆಗೆ ಪ್ರವೇಶ ಪಡೆದಿದ್ದ ಅವರು, ಮೂಲತಃ ಮಂಡ್ಯ ತಾಲೂಕಿನ ಹನಕೆರೆಯವರು.
ಕನ್ನಡದಲ್ಲಿ ಅವರು ʼರೋಬೋ ಫ್ಯಾಮಿಲಿʼ ಸೇರಿ ʼಜೋಕಾಲಿʼ, ʼನೀಲಿʼ, ʼರಾಧಾರಮಣʼ ಧಾರವಾಹಿಯಲ್ಲಿ ನಟಿಸಿದ್ದರು.
ಘಟನೆಯಲ್ಲಿ ಪವಿತ್ರ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರಿನಲ್ಲಿ ಅವರ ಕುಟುಂಬಸ್ಥರು ಇದ್ದರು ಎನ್ನಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರಬೀಳಬೇಕಿದೆ.
ನಟಿಯ ಹಠಾತ್ ನಿಧನಕ್ಕೆ ಕಿರುತೆರೆ ಲೋಕ ಶಾಕ್ ಆಗಿದೆ.
