Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ʼವಿಜಯಪುರ: ಧಾರಾಕಾರ ಮಳೆಗೆ ಬೃಹತ್ ಮರ ನೆಲಕ್ಕುರುಳಿದ ಘಟನೆʼ

Spread the love


ವಿಜಯಪುರ: ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಬೃಹತ್ ಮರವೊಂದು ನೆಲಕ್ಕುರುಳಿದ ಘಟನೆ ನಗರದ ಕೇಂದ್ರ ಬಸ್ ನಿಲ್ದಾಣದಿಂದ ಗಾಂಧಿಚೌಕ್‌ಗೆ  (Gandhi Chowk) ಹೋಗುವ ಮಾರ್ಗದಲ್ಲಿ ನಡೆದಿದೆ.

ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಗುರುವಾರ (ಸೆ.11) ತಡರಾತ್ರಿ ಬೃಹತ್ ಮರವೊಂದು ನೆಲಕ್ಕುರುಳಿದೆ. ರಾತ್ರಿ ಧರೆಗುರುಳಿದ ಪರಿಣಾಮ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಮರ ಬಿದ್ದ ರಭಸಕ್ಕೆ ಎರಡು, ಮೂರು ಅಂಗಡಿಗಳು ಜಖಂ ಆಗಿವೆ. ಜೊತೆಗೆ ವಿದ್ಯುತ್ ಕಂಬಗಳಿಗೂ ಹಾನಿಯಾಗಿದ್ದು, ವೈರ್ ಕಡಿತಗೊಂಡಿದೆ.


Spread the love
Share:

administrator

Leave a Reply

Your email address will not be published. Required fields are marked *